Monday, August 31, 2026

BDA Apartments

Home Cinema ಆಂಧ್ರದ 7 ಜಿಲ್ಲೆಗಳಲ್ಲಿ ಆಕ್ಸಿಜನ್ ಬ್ಯಾಂಕ್ ಆರಂಭಿಸಿದ ಚಿರಂಜೀವಿ

ಆಂಧ್ರದ 7 ಜಿಲ್ಲೆಗಳಲ್ಲಿ ಆಕ್ಸಿಜನ್ ಬ್ಯಾಂಕ್ ಆರಂಭಿಸಿದ ಚಿರಂಜೀವಿ

ಬೆಂಗಳೂರು, ಮೇ 27, 2021 (www.justkannada.in): ನಟ ಚಿರಂಜೀವಿ ಆಂಧ್ರಪ್ರದೇಶದ 7 ಜಿಲ್ಲೆಗಳಲ್ಲಿ ಆಕ್ಸಿಜನ್ ಬ್ಯಾಂಕ್ ಆರಂಭಿಸಲಿದ್ದಾರೆ.

ಹೌದು. ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ ಅಲ್ಲದೇ ಆಕ್ಸಿಜನ್ ಬ್ಯಾಂಕ್ ತೆರೆಯಲಾಗುತ್ತಿದೆ.

ಬ್ಯಾಂಕ್ ನಲ್ಲಿ ಆಕ್ಸಿಜನ್ ಕನ್ಸಟ್ರೇಟರ್ಸ್, ಔಷಧ ಸೇರಿದಂತೆ ವೈದ್ಯಕೀಯ ಸೌಲಭ್ಯಗಳು ಇರಲಿವೆ.

ಚಿರಂಜೀವಿ ಪುತ್ರ ರಾಮ್ ಚರಣ್ ಆಕ್ಸಿಜನ್ ಬ್ಯಾಂಕ್ ಕಾರ್ಯ ಚಟುವಟಿಕೆಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಆಕ್ಸಿಜನ್ ಕೊರತೆಯಿಂದ ಜನ ಮೃತಪಡುತ್ತಿರುವುದನ್ನು ನೋಡಲಾರದೇ ಆಮ್ಲಜನಕ ಬ್ಯಾಂಕ್ ಆರಂಭಿಸಲಾಗಿದೆ. ಜನ ಇದರ ನೆರವು ಪಡೆಯುವಂತೆ ಸೂಪರ್ ಸ್ಟಾರ್ ಕೋರಿದ್ದಾರೆ.