ರಿಯಲ್ ಸ್ಟಾರ್ ಉಪೇಂದ್ರ ಟ್ವಿಟ್ಟರ್ ಫಾಲೋವರ್ಸ್ ಒಂದು ಮಿಲಿಯನ್’ಗೆ ಏರಿಕೆ

ಬೆಂಗಳೂರು, ಮೇ 27, 2021 (www.justkannada.in): ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಟ್ವಿಟ್ಟರ್ ಖಾತೆಯಲ್ಲಿ ಫಾಲೋವರ್ಸ್’ಗಳ ಸಂಖ್ಯೆ ಫುಲ್ ಏರುಮುಖ ಹಾದಿಯಲ್ಲಿದೆ!

ಹೌದು, ರಿಯಲ್ ಸ್ಟಾರ್’ಗೆ ಟ್ವಿಟರ್‌ನಲ್ಲಿ 1 ಮಿಲಿಯನ್‌ ಫಾಲೋವರ್ಸ್‌ ಆಗಿದ್ದಾರೆ. ಇದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ ಉಪ್ಪಿ.

ಅಂದಹಾಗೆ ಸುದೀಪ್ ನಂತರದ ಸ್ಥಾನದಲ್ಲಿ ಉಪ್ಪಿ ಸೇರಿದ್ದಾರೆ. ಸುದೀಪ್ ಟ್ವಿಟರ್‌ನಲ್ಲಿ 2 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಇತ್ತೀಚಿಗೆ ಉಪ್ಪಿ ಸಮಾಜ ಸೇವೆಗೆ ಜನ ಮನಸೋತಿದ್ದಾರೆ. ಜತೆಗೆ ಅವರು ಸಕ್ರಿಯ ರಾಜಕೀಯದತ್ತ ಹೆಜ್ಜೆ ಹಾಕಿದ್ದಾರೆ. ಅವರಿಗೆ ರಾಜಕೀಯ ಅಧಿಕಾರ ಸಿಗಲಿ ಎಂದು ಅಭಿಮಾನಿಗಳೂ ಹಾರೈಸುತ್ತಿದ್ದಾರೆ.