ಏಳು ತಿಂಗಳ ಬಳಿಕ ಪ್ರದರ್ಶನಕ್ಕೆ ಸಜ್ಜಾದ ಚಿತ್ರಮಂದಿರಗಳು: ಸ್ಯಾಂಡಲ್ ವುಡ್ ನಲ್ಲಿ ರಿಲೀಸ್’ಗೆ ಚಿರಂಜೀವಿ ಸರ್ಜಾ ‘ರಣಂ’ ರೆಡಿ

ಬೆಂಗಳೂರು, ಅಕ್ಟೋಬರ್ 02, 2020 (www.justkannada.in): ಸುಮಾರು 7 ತಿಂಗಳುಗಳ ಕಾಲ ಮುಚ್ಚಿದ್ದ ಚಿತ್ರಮಂದಿರಗಳು ಇದೀಗ ಸಿನಿಮಾ ಪ್ರದರ್ಶನಕ್ಕೆ ಸಿದ್ಧವಾಗುತ್ತಿವೆ.

ಕೊರೊನಾ ಬಳಿಕ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ‘ರಣಂ’. ಚಿರಂಜೀವಿ ಸರ್ಜಾ ಮತ್ತು ಚೇತನ್ ಕುಮಾರ್ ಅಭಿನಯದ ಈ ಸಿನಿಮಾ ಲಾಕ್ ಡೌನ್ ಬಳಿಕ ಮೊದಲ ಸಿನಿಮಾವಾಗಿ ತೆರೆಗೆ ಬರುತ್ತಿದೆ.

ಗಾಂಧಿನಗರದ ನರ್ತಕಿ ಚಿತ್ರಮಂದಿರ ಪ್ರಮುಖ ಚಿತ್ರಮಂದಿರವಾಗಿ ‘ರಣಂ’ ಸಿನಿಮಾ ಸ್ವಾಗತಕ್ಕೆ ಸಜ್ಜಾಗಿದೆ. ‘ರಣಂ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾ ನಟ ಚೇತನ್ ಬದುಕಿಗೆ ತುಂಬ ಹತ್ತಿರವಾದ ಸಿನಿಮಾ ಎಂದು ಸ್ವತಃ ಚೇತನ್ ಹೇಳಿಕೊಂಡಿದ್ದಾರೆ. ನೈಜ ಬದುಕಿನ ಹಾಗೆ ಸಿನಿಮಾದಲ್ಲೂ ಸಾಮಾಜಿಕ ಹೋರಾಟ, ರೈತಪರ ಕಾಳಜಿ ಇರುವಂತಹ ನಾಯಕನ ಪಾತ್ರ ಇದಾಗಿದೆಯಂತೆ.