ನಾನು ಬಡತನದಲ್ಲಿ ಬೆಳೆದ ಹುಡುಗಿ, ಪಾರ್ಟಿಗಳಿಗೆ ಹೋಗಿಲ್ಲ, ಯಾವತ್ತೂ ಡ್ರಗ್ಸ್ ಸೇವಿಸಿಲ್ಲ: ಮನದಾಳ ಬಿಚ್ಚಿಟ್ಟ ಅನುಶ್ರೀ

ಬೆಂಗಳೂರು, ಅಕ್ಟೋಬರ್ 02, 2020 (www.justkannada.in): ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ನಟಿ, ನಿರೂಪಕಿ ಅನುಶ್ರೀ ಮಾತನಾಡಿದ್ದಾರೆ.
ನಾನು ತುಂಬಾ ಬಡತನದಿಂದ ಬಂದವಳು. ನನಗೆ ಮೊದಲಿನಿಂದಲೂ ಪಾರ್ಟಿ ಬಗ್ಗೆ ಆಸಕ್ತಿಯಲ್ಲ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.
ಡ್ರಗ್ಸ್ ಸೇವನೆ ಬಗೆಗಿನ ಆರೋಪದಿಂದ ನನಗೆ ಶಾಕ್ ಆಗಿದೆ. ನಾನು ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗುವವಳಲ್ಲ.
14 ವರ್ಷಗಳ ಹಿಂದೆ ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಹತ್ತಿ ಒಬ್ಬಳೇ ಬಂದೆ. ಕಷ್ಟಪಟ್ಟು ಇಲ್ಲಿಯವರೆಗೂ ಬಂದಿದ್ದೇನೆ. 12 ವರ್ಷಗಳ ಕಾಲ ಹಾಸ್ಟೆಲ್ ನಲ್ಲೇ ಇದ್ದೆ. ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗದ ನನಗೆ ಏಕಾಏಕಿ ಸಿಸಿಬಿ ನೊಟೀಸ್, ಪೊಲೀಸ್ ಎಂದಾಗ ಭಯವಾಯಿತು ಎಂದು ಅನುಶ್ರೀ ಹೇಳಿಕೊಂಡಿದ್ದಾರೆ.
ನಾನು ಯಾವತ್ತೂ ಡ್ರಗ್ಸ್ ಸೇವನೆ ಮಾಡಿಲ್ಲ. ನಾನು ಶೂಟಿಂಗ್ ಗೆ ಮಾತ್ರ ಹೋಗುತ್ತೇನೆ ಹೊರತು ಪಾರ್ಟಿಗಳಲ್ಲಿ ಭಾಗಿಯಾಗಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ಹೇಗೆ ಬಂತೆಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.