ಮಗು ಮಾರಾಟ ಪ್ರಕರಣ: ದೂರು ದಾಖಲಾದ 24 ಗಂಟೆಯೊಳಗೆ ತಾಯಿ ಮಡಿಲು ಸೇರಿದ ಮಗು

0
2

ಚಾಮರಾಜನಗರ,ಸೆಪ್ಟಂಬರ್,22,2022(www.justkannada.in):  ಚಾಮರಾಜನಗರದಲ್ಲಿ ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ  ದೂರು ದಾಖಲಾದ 24 ಗಂಟೆಯೊಳಗೆ ಪೊಲೀಸರು ಮಗುವನ್ನ ಪತ್ತೆ ಹಚ್ಚಿ ತಾಯಿ ಮಡಿಲಿಗೆ ಸೇರಿಸಿದ್ದಾರೆ.

ಹೊಟೇಲ್ ಕಾರ್ಮಿಕ ಬಸವ ಎಂಬಾತ ತನ್ನ 25 ದಿನಗಳ ಹಸುಗೂಸನ್ನು 50 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದನು.  ಸಹಕಾರ್ಮಿಕ ಖಾಸೀಫ್ ಎಂಬಾತನ ಮೂಲಕ ಮಂಡ್ಯ ಜಿಲ್ಲೆ ಮದ್ದೂರು ದಂಪತಿಗೆ ಮಾರಾಟ ಮಾಡಿದ್ದ

ಇದೀಗ ಖಾಸೀಫ್ ಬಂಧಿಸಿದ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು  ಆತನ ಮೂಲಕ ಮಗು ಖರೀದಿಸಿದ್ದ ದಂಪತಿ ಸಂಪರ್ಕಿಸಿ ಮಗುವನ್ನು ತಾಯಿ ಮಡಿಲು ಸೇರಿಸಿದ್ದಾರೆ.

ಬಡತನ ಹಾಗೂ ಪತ್ನಿಗೆ ಹೃದಯ ಕಾಯಿಲೆ ಹಿನ್ನಲೆ ಬಸವ ಸಾಕಷ್ಟು ಸಾಲ ಮಾಡಿದ್ದ. ಬಡತನದಿಂದ ಮಗು ಸಾಕಲಾಗದೆ ಹಾಗೂ ಸಾಲ ತೀರಿಸುವ ಸಲುವಾಗಿ ಪತ್ನಿ ಒಪ್ಪದಿದ್ದರೂ ಬೆದರಿಕೆ ಹಾಕಿ ಮಗು ಮಾರಾಟ ಮಾಡಿದ್ದನು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

Key words: Child -selling –mother- within -24 hours –chamarajanagar-police