‘ಕ್ರಾಂತಿ’ ಸಿನಿಮಾದ ಸ್ಪೆಷಲ್ ಸಾಂಗ್ ಚಾಲೆಂಜಿಂಗ್ ಸ್ಟಾರ್ ಸ್ಟೆಪ್

0
1

ಬೆಂಗಳೂರು, ಸೆಪ್ಟೆಂಬರ್ 22 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾದ ಸ್ಪೆಷಲ್ ಸಾಂಗ್ ಶೂಟಿಂಗ್ ಶುರುವಾಗಿದೆ.

ಇತ್ತೀಚಿಗೆ ಸ್ನೇಹಿತರ ಜೊತೆ ಥೈಲ್ಯಾಂಡ್ ಪ್ರವಾಸ ಮುಗಿಸಿದ ಬಂದಿದ್ದ ನಟ ದರ್ಶನ್ ಬಿಂದಾಸ್ ಸ್ಟೆಪ್ಸ್ ಹಾಕ್ತಿದ್ದಾರೆ.

ಅಂದಹಾಗೆ ದರ್ಶನ್- ವಿ. ಹರಿಕೃಷ್ಣ ಕಾಂಬಿನೇಷನ್‌ ಸಿನಿಮಾ ಅಂದಾಗ ಸ್ಪೆಷಲ್ ಸಾಂಗ್ ಮಾಮೂಲಿ! ಹೀಗಾಗಿ ‘ಕ್ರಾಂತಿ’ ಸಿನಿಮಾ ಸ್ಪೆಷಲ್ ಸಾಂಗ್ ಗಾಗಿ ಅಂತ ಅಭಿಮಾನಿಗಳು ಕಾಯ್ತಿದ್ದಾರೆ.

‘ಕ್ರಾಂತಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸ್ವತಃ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ದರ್ಶನ್ ಜೊತೆ ರಚ್ಚು ಈ ಡ್ಯಾನ್ಸಿಂಗ್‌ ನಂಬರ್‌ಗೆ ಹೆಜ್ಜೆ ಹಾಕ್ತಿದ್ದಾರಾ ಅನ್ನುವ ಕುತೂಹಲವೂ ಇದೆ.