Thursday, September 24, 2026

BDA Apartments

Home Front Page ರಾಜ್ಯ ಅಂಡರ್-9 ಚೆಸ್ ಚಾಂಪಿಯನ್‌ ಶಿಪ್: ಮೈಸೂರಿನ ಕೌಸ್ತುಭ್ ತೇಜಕುಮಾರ್ ರನ್ನರ್-ಅಪ್

ರಾಜ್ಯ ಅಂಡರ್-9 ಚೆಸ್ ಚಾಂಪಿಯನ್‌ ಶಿಪ್: ಮೈಸೂರಿನ ಕೌಸ್ತುಭ್ ತೇಜಕುಮಾರ್ ರನ್ನರ್-ಅಪ್

ಮೈಸೂರು, ಜೂನ್,22, 2026 (www.justkannada.in): ಮೈಸೂರಿನ ಯುವ ಚೆಸ್ ಪ್ರತಿಭೆ  ಕೌಸ್ತುಭ್ ತೇಜಕುಮಾರ್ ಅವರು ಬೆಂಗಳೂರಿನಲ್ಲಿ ನಡೆದ ರಾಜ್ಯ ಅಂಡರ್-9 ಚೆಸ್ ಚಾಂಪಿಯನ್ ಶಿಪ್‌ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, 9 ಸುತ್ತುಗಳಲ್ಲಿ 8 ಅಂಕಗಳನ್ನು ಗಳಿಸಿ ರನ್ನರ್-ಅಪ್  ಆಗಿ ಹೊರಹೊಮ್ಮಿದ್ದಾರೆ.

ಕೌಸ್ತುಭ್ ಅವರು ಈ ಹಿಂದೆ ರಾಜ್ಯ 7 ಚೆಸ್ ಚಾಂಪಿಯನ್ ಆಗಿದ್ದಾರೆ.  ಜೊತೆಗೆ, ರಾಷ್ಟ್ರೀಯ ಶಾಲಾ ಚೆಸ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ರಾಷ್ಟ್ರೀಯ ಮಟ್ಟದಲ್ಲಿಯೂ  ಪರೀಕ್ಷಿಸಿದ್ದಾರೆ.

ಕೌಸ್ತುಭ್ ಅವರು ಮೈಸೂರಿನ ವಿಜಯನಗರದಲ್ಲಿರುವ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ಶಾಲೆಯ ವಿದ್ಯಾರ್ಥಿ.  ಅವರು ಕರ್ನಾಟಕದ ಮೊದಲ ಗ್ರ್ಯಾಂಡ್‌ ಮಾಸ್ಟರ್ ಆಗಿರುವ ತೇಜ್‌ ಕುಮಾರ್ ಎಂಎಸ್ ಅವರ ಪುತ್ರರಾಗಿದ್ದಾರೆ.ರಾಜ್ಯ ಅಂಡರ್ jk02_new jk02 new

ಕೌಸ್ತುಭ್ ಅವರ ಈ ಸಾಧನೆ ಮೈಸೂರು ನಗರ ಚೆಸ್ ವಲಯಕ್ಕೆ ಹೆಮ್ಮೆಯ ವಿಷಯವಾಗಿದೆ, ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುತ್ತದೆ  ವಿಶ್ವಾಸವನ್ನು ಮೂಡಿಸಿದೆ.

Key words:  Under-9, Chess Championship, Mysore, Kaustubh Tejkumar, runner-up