Wednesday, October 7, 2026

BDA Apartments

immense respect BDA JK_Adv BDA Adv
Home Crime ಚಿನ್ನ ಅಡವಿಟ್ಟಿದ್ದ ಜನರಿಗೆ ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಚಿನ್ನ ಅಡವಿಟ್ಟಿದ್ದ ಜನರಿಗೆ ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಮೈಸೂರು,ಫೆಬ್ರವರಿ,19,2026 (www.justkannada.in): ಜನರು ಅಡವಿಟ್ಟ ಚಿನ್ನದ ಕೊಂಡಿಗಳನ್ನ ಕರಗಿಸಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರಿಸಿಕೊಂಡಿದ್ದ ಚಿನ್ನಾಭರಣ ಮೌಲ್ಯಮಾಪಕನನ್ನು ವಿಜಯನಗರ ಠಾಣಾ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಮೈಸೂರಿನ ಗೋಕುಲಂ ಮೂರನೇ ಹಂತದ ನಿವಾಸಿ ಚಿನ್ನಾಭರಣ ಮೌಲ್ಯಮಾಪಕ ಎಂ.ಅಶ್ವಿನ್ ಕುಮಾರ್ ಬಂಧಿತ ಆರೋಪಿ. ಈತ ಬ್ಯಾಂಕಾಂಕ್ ನಲ್ಲಿ ತಲೆ ಮರೆಸಿಕೊಂಡಿದ್ದ ಎನ್ನಲಾಗಿದ್ದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕೆನರಾ ಬ್ಯಾಂಕಿನಲ್ಲಿ ಗಿರವಿ ಇಟ್ಟ ಚಿನ್ನಾಭರಣ ತೂಕದಲ್ಲಿ ವ್ಯತ್ಯಾಸವಾಗಿತ್ತು. ಅಡವಿಟ್ಟ ಚಿನ್ನದ ಕೊಂಡಿಗಳನ್ನ ಕರಗಿಸಿ ಮೌಲ್ಯಮಾಪಕ ಎಂ.ಅಶ್ವಿನ್ ಕುಮಾರ್ ವಂಚನೆ ಮಾಡಿದ್ದನು. ಸಾವಿರಾರು ಜನರು ಮೋಸ ಹೋಗಿದ್ದರು. ನಂತರ ವಂಚನೆಗೆ ಒಳಗಾದವರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೀಗ ವಿಜಯನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Key words: Mysore, Accused, cheated, people, gold