Wednesday, October 7, 2026

BDA Apartments

immense respect BDA JK_Adv BDA Adv
Home Front Page ಸಾರಿಗೆ ನೌಕರರ ಬೇಡಿಕೆ ನ್ಯಾಯಸಮ್ಮತ: ಹೋರಾಟಕ್ಕೆ ಸಹಮತವಿದೆ-ಸಚಿವ ಸಂತೋಷ್ ಲಾಡ್

ಸಾರಿಗೆ ನೌಕರರ ಬೇಡಿಕೆ ನ್ಯಾಯಸಮ್ಮತ: ಹೋರಾಟಕ್ಕೆ ಸಹಮತವಿದೆ-ಸಚಿವ ಸಂತೋಷ್ ಲಾಡ್

ಧಾರವಾಡ,ಫೆಬ್ರವರಿ,19,2026 (www.justkannada.in): ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸಂತೋಷ್ ಲಾಡ್,  ಸಾರಿಗೆ ಸಚಿವರು ನೌಕರರ ಮುಷ್ಕರದ ಬಗ್ಗೆ ಮಾತನಾಡುತ್ತಾರೆ. ಸಾರಿಗೆ ನೌಕರರ ಬೇಡಿಕೆಗಳು ನ್ಯಾಯ ಸಮ್ಮತವಾಗಿದೆ ನೌಕರರ ಹೋರಾಟಕ್ಕೆ ಸಹಮತ ಇದೆ ಎಂದಿದ್ದಾರೆ.

ಎಲ್ಲಾ ಸರ್ಕಾರಗಳಲ್ಲೂ ಹೋರಾಟಗಳು ನಡೆಯುತ್ತವೆ.  ಅವರ ಹೋರಾಟಕ್ಕೆ ಸಹಮತ ಸ್ವಾಗತ ಇದೆ ಸಾರಿಗೆ ನೌಕರರ ಹೋರಾಟದ ಬಗ್ಗೆ ಸಚಿವರು ಆಲಿಸುತ್ತಾರೆ.  ಅವರಿಗೆ ನಾವು ಸಹ ಸಹಾಯ ಮಾಡುತ್ತೇವೆ ಎಂದು ಸಚಿವ ಸಂತೋಷ್ ಲಾಡ್  ತಿಳಿಸಿದರು.

Key words: Transport workers,  demands, Minister, Santosh Lad