Sunday, August 23, 2026

BDA Apartments

Home Front Page ಚಾಮುಂಡಿಬೆಟ್ಟದ ತಪ್ಪಿನಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ 35ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿವೀಕ್ಷಣೆ…!

ಚಾಮುಂಡಿಬೆಟ್ಟದ ತಪ್ಪಿನಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ 35ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿವೀಕ್ಷಣೆ…!

ಮೈಸೂರು,ಜನವರಿ,03,2021(www.justkannada.in)  :  ಮೈಸೂರ್ ಸೈನ್ಸ್ ಫೌಂಡೇಶನ್ ಮತ್ತು ಅರಣ್ಯ  ಔಟ್ ರೀಚ್ ಸಹಯೋಗದಲ್ಲಿ ಮೈಸೂರಿನ ರಿಂಗ್ ರಸ್ತೆಯಲ್ಲಿ ಚಾಮುಂಡಿಬೆಟ್ಟದ ತಪ್ಪಿನಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ ಪಕ್ಷಿವೀಕ್ಷಣೆ ನಡೆಸಲಾಯಿತು.jk-logo-justkannada-mysore

ಹವ್ಯಾಸಿ ಪಕ್ಷಿತಜ್ಞ ಎಂ.ಪಿ.ಸಪ್ತ ಗಿರೀಶ್ ಅವರು ಪಕ್ಷಿ ವೀಕ್ಷಕರಿಗೆ ಮಾಹಿತಿ ನೀಡಿದರು. ಪ್ರಕೃತಿಯಲ್ಲಿ ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳುವಲ್ಲಿ ಕೆರೆಗಳ ಪಾತ್ರ ಮಹತ್ತರವಾದದ್ದು ಅದರಲ್ಲೂ ಪಕ್ಷಿಗಳಿಗೆ ಬಹಳ ಮುಖ್ಯವಾದದ್ದು. ಕೆರೆಗಳು ಇದ್ದಲ್ಲಿ ಪಕ್ಷಿಗಳು ಸಹಜವಾಗಿ ಬರುತ್ತವೆ ಎಂದರು.

ಪಕ್ಷಿಗಳ ಬಗ್ಗೆ ತಿಳಿಯಬೇಕಾದರೆ ಅವುಗಳನ್ನು ತೀಕ್ಷಣವಾಗಿ ಗಮನಿಸಬೇಕು. ಅವುಗಳ ಕೊಕ್ಕು ,ರೆಕ್ಕೆ ಬಾಲ, ಕಾಲು, ಶಬ್ದ ಇವುಗಳಿಂದ ಅವುಗಳನ್ನು ಗುರುತಿಸಬಹುದು. ಕೆರೆಗಳು ಇದ್ದರೆ ಮಾತ್ರ ಪಕ್ಷಿಗಳು ಬರುತ್ತವೆ ಅನೇಕ ಕೆರೆಗಳು ಮೈಸೂರಿನಲ್ಲಿ ನಶಿಸಿಹೋಗಿವೆ ಇರುವ ಕೆಲವೇ ಕೆಲವು ನದಿಗಳ ಕೆರೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. Chamundibetta,lake,Thippaiah,35.species,Birdwatching ...!

ನಾವು ಕೆರೆಗಳ ನಿರ್ಮಾಣ ಮಾಡಬೇಕಾಗಿರುವ ಅವಶ್ಯಕತೆ ಇಲ್ಲ. ಇರುವುದನ್ನು ಉಳಿಸಿಕೊಳ್ಳಬೇಕೆಂಬ ಎಂದು ಹವ್ಯಾಸಿ ಪಕ್ಷಿತಜ್ಞ ಎಂಪಿ ಸಪ್ತ ಗಿರೀಶ್ ಮನವಿ ಮಾಡಿದರು.

ಕಾಜಾಣ ಅಥವ ನೀರು ಕಾಗೆ, ಗೀಜಗ, ಗಿಳಿ, ಪಾರಿವಾಳ, ಗೌಜಲಕ್ಕಿ ಕಾಡುಕೋಳಿ, ಬಕ ಪಕ್ಷಿ, ಮೈನಾ, ಕೊಕ್ಕರೆ  ಮುಂತಾದ ಸುಮಾರು 35ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳನ್ನು ವೀಕ್ಷಣೆ ಮಾಡಲಾಯಿತು. Chamundibetta,lake,Thippaiah,35.species,Birdwatching ...!

ಪಕ್ಷಿ ವೀಕ್ಷಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಪಕ್ಷಿ ಪ್ರೇಮಿಗಳು ಭಾಗಿಯಾಗಿದ್ದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು, ಮೆಡಿಕಲ್ ಕಾಲೇಜಿನ ವೈದ್ಯ ಡಾಕ್ಟರ್ ವಿ.ಸವಿತಾ, ಹರಿ ವಿದ್ಯಾಲಯದ ಮುಖ್ಯಸ್ಥ ಭಗವಾನ್, ಮೈಸೂರು ಸೈನ್ಸ್  ಫೌಂಡೇಶನ್ ಕಾರ್ಯದರ್ಶಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.‌

key words : Chamundibetta-lake-Thippaiah-35-species-Birdwatching …!