ರಾಜ್ಯದಲ್ಲೇ ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಅಗ್ರಸ್ಥಾನ.

ಚಾಮರಾಜನಗರ,ಆಗಸ್ಟ್,10,2023(www.justkannada.in):  ರಾಜ್ಯದಲ್ಲೇ ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಅಗ್ರಸ್ಥಾನ ಸಿಕ್ಕಿದೆ.

ರಾಜ್ಯದಲ್ಲಿ ಅತಿಹೆಚ್ಚು ಆನೆಗಳನ್ನು ಹೊಂದಿರುವ ಜಿಲ್ಲೆಯಾಗಿ ಚಾಮರಾಜನಗರ ಗುರುತಿಸಿಕೊಂಡಿದೆ. 2023ರ ಮೇ 17ರಿಂದ 19ರ ವರೆಗೆ ನಡೆದ ಆನೆ ಗಣತಿ ವರದಿಯನ್ನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಿಡುಗಡೆ ಮಾಡಿದರು.

ಆನೆಗಳ ಸಂಖ್ಯೆಯಲ್ಲಿ ಬಂಡಿಪುರಕ್ಕೆ ಮೊದಲ ಸ್ಥಾನ, ನಾಗರಹೊಳೆಗೆ ದ್ವಿತೀಯ ಸ್ಥಾನ,  ಬಿಆರ್ ಟಿ ತೃತೀಯ ಹಾಗೂ ಎಂಎಂ ಹಿಲ್ಸ್ ಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಬಂಡಿಪುರದಲ್ಲಿ 1116, ಬಿಆರ್ ಟಿಯಲ್ಲಿ 484, ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ 557 ಆನೆಗಳು ವಾಸಿಸುತ್ತಿವೆ.  ರಾಜ್ಯದ 32 ವಿಭಾಗಗಳಿಂದ 3400 ಅರಣ್ಯ ಸಿಬ್ಬಂದಿಯಿಂದ ಆನೆ ಗಣತಿ ಕಾರ್ಯ ನಡೆದಿತ್ತು.

-V.Mahesh kumar

Key words: Chamarajanagar- district- top- number of elephants – state.