Wednesday, August 19, 2026

BDA Apartments

Home Cinema ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಚಾಲೆಂಜಿಂಗ್ ಸ್ಟಾರ್

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು, ಆಗಸ್ಟ್ 12, 2022 (www.justkannada.in): ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್  ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ.

1997 ಆಗಸ್ಟ್ 11ರಂದು ಎಸ್‌. ನಾರಾಯಣ್ ನಿರ್ದೇಶನದ ‘ಮಹಾಭಾರತ’ ಚಿತ್ರ ರಿಲೀಸ್ ಆಗಿತ್ತು. ಇದು ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ.

ಬಳಿಕ ‘ಮೆಜೆಸ್ಟಿಕ್’ ಸಿನಿಮಾ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ ದಚ್ಚು ಇದುವರೆಗೆ ಇಂತಿರುಗಿ ನೋಡಿಲ್ಲ.. ದರ್ಶನ್ ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಸಂಭ್ರಮಿಸುವುದಕ್ಕಾಗಿ ಹೊಸ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆ ಕಾಮನ್ ಡಿಪಿ ಸಖತ್ ಸದ್ದು ಮಾಡ್ತಿದ್ದು, ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

ನಟ ದರ್ಶನ್ ಸಿನಿಮಾರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಸಿನಿಮಾ ಮಂದಿ ಕೂಡ ಆಚರಿಸುತ್ತಿದ್ದಾರೆ. ಹಲವಾರು ನಟ-ನಟಿಯರು ದರ್ಶನ್ ಗೆ ವಿಶ್ ಮಾಡಿದ್ದಾರೆ.