Thursday, September 10, 2026

BDA Apartments

Home Front Page ಕೆಪಿಎಸ್ ಸಿಯಲ್ಲಿ ಅಕ್ರಮ: ಮೂರ್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಹೋರಾಟ- ಛಲವಾದಿ ನಾರಾಯಣಸ್ವಾಮಿ

ಕೆಪಿಎಸ್ ಸಿಯಲ್ಲಿ ಅಕ್ರಮ: ಮೂರ್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಹೋರಾಟ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಜುಲೈ,27,2026 (www.justkannada.in):  ಕೆಪಿಎಸ್ ಸಿ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಆಗಿರುವ ಅಕ್ರಮವನ್ನ ಖಂಡಿಸಿ ಮೂರ್ನಾಲ್ಕು ದಿನಗಳಲ್ಲಿ ಹೋರಾಟ ಆರಂಭವಾಗುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ದಡ್ಡರನ್ನು ಬುದ್ದಿವಂತರನ್ನಾಗಿ ಮಾಡುವ ಸಂಸ್ಥೆ ಇದ್ದರೆ ಅದು ಕೆಪಿಎಸ್ ಸಿ. ಕೆಪಿಎಸ್ ಸಿಯಲ್ಲಿ ಮನಸ್ಸೋ ಇಚ್ಛೇ ತೀರ್ಮಾನ ತೆಗೆದುಕೊಂಡಿದ್ದಾರೆ.  ನಾವು ಪ್ರಶ್ನಿಸಿದಾಗ ಕೆಪಿಎಸ್ ಸಿ ಅಧಿಕಾರಿಗಳಿಗೆ ಬಹಳ ಮುಜುಗರ ಆಗಿದೆ.  ಮೂರ್ನಾಲ್ಕು ದಿನದಲ್ಲಿ ಕರ್ನಾಟಕದಲ್ಲಿ ಹೋರಾಟ ಆರಂಭವಾಗುತ್ತೆ. ಹೋರಾಟಕ್ಕೆ ಬಿಜೆಪಿ ಕೂಡ ಸಂಪೂರ್ಣ ಬೆಂಬಲ ನೀಡಲಿದೆ.  ಕಳಂಕ ರಹಿತವಾಗಿ  ಪರೀಕ್ಷೆ ನಡೆಸಲು ಕೆಪಿಎಸ್ ಸಿಗೆ ಆಗ್ರಹಿಸಿದ್ದೇವೆ ಎಂದರು.

ಕೆಪಿಎಸ್ ಸಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಪಿಎಸ್ ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಅವರನ್ನ ಈಗಾಗಲೇ ರಾಜ್ಯಪಾಲರು ವಜಾಗೊಳಿಸಿದ್ದಾರೆ.  ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.

Key words: KPSC, Illegal, Struggle, Chalavadi Narayanaswamy