ಪ್ರಪಂಚಕ್ಕೆ ಅರ್ಥ ಆಗುತ್ತೆ, ಆದ್ರೆ ಕಾಂಗ್ರೆಸ್ಸಿಗರಿಗೆ ಅರ್ಥ ಆಗಲ್ಲ-ಛಲವಾದಿ ನಾರಾಯಣಸ್ವಾಮಿ ಕಿಡಿ

ಬೆಂಗಳೂರು,ಮಾರ್ಚ್,11,2026 (www.justkannada.in): ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ದಾಳಿ ಮಾಡುತ್ತಿದ್ದು ಮಧ್ಯಪ್ರಾಚ್ಯದಲ್ಲಿ ಯುದ್ದದ ಪರಿಸ್ಥಿತಿ ಉಂಟಾಗಿದೆ. ಈ ಹೀಗಾಗಿ  ಭಾರತದಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಆದರೆ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿರುವ  ಕಾಂಗ್ರೆಸ್ ವಿರುದ್ದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ರಾಜ್ಯದಲ್ಲಿ ಹಲವೆಡೆ ವಾಣಿಜ್ಯ  ಬಳಕೆ ಸಿಲಂಡರ್ ಅಭಾವ, ಇದು ತಾತ್ಕಾಳಿಕ ಸಮಸ್ಯೆ. ಯುದ್ದ ಆರಂಭವಾಗಿರುವುದಂರಿಂದ ಪ್ರಪಂಚದಲ್ಲೇ ಸಮಸ್ಯೆಯಾಗಿದೆ ಪ್ರಪಂಚಕ್ಕೆ ಅರ್ಥ ಆಗುತ್ತೆ.  ಆದರೆ ಕಾಂಗ್ರೆಸ್ಸಿಗರಿಗೆ ಅರ್ಥ ಆಗಲ್ಲ ಎಂದು ಟಾಂಗ್ ಕೊಟ್ಟರು.

ಪ್ರತಿಭಟನೆ ಮಾಡಬೇಕೆಂಬ ಕಾರಣಕ್ಕೆ ರಸ್ತೆಯಲ್ಲಿ ಅಡುಗೆ ತಯಾರು ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ, ಇಂದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವ ಸಂದರ್ಭವಲ್ಲ. ತಪ್ಪು ಮಾಡಿ ಗ್ಯಾಸ ಪೆಟ್ರೋಲ್ ಸಿಗದಿದ್ದರೆ ಹೋರಾಟ ಮಾಡಲಿ. ಕಾಂಗ್ರೆಸ್ ನವರು ರಾಜಕೀಯ ಮಾಡುತ್ತಿದ್ದಾರೆ . ಕಾಂಗ್ರೆಸ್ ಮನಸ್ಥಿತಿ ಪ್ರಜ್ಞಾಹೀನವಾಗಿದೆ ಎಂಬುದು ಗೊತ್ತಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

Key words: Congress, Gas cylinder, disruption, Chalavadi Narayanaswamy