ರಾಜ್ಯಗಳಿಗೆ ಜಿಎಸ್ ಟಿ ಪಾಲು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ: ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು..?

ನವದೆಹಲಿ,ಜೂನ್,12,2023(www.justkannada.in): ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಜಿಎಸ್ ಟಿ ಪಾಲು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ : 4,314 ಕೋಟಿ ರೂ. ಹಂಚಿಕೆ ಮಾಡಿದೆ.

ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಒಟ್ಟಿಗೆ ಎರಡು ಕಂತುಗಳ ಜಿಎಸ್​ಟಿ ಪಾಲು ಹಂಚಿಕೆ ಮಾಡಿದೆ. ಒಟ್ಟು 1,18,280 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದೆ. ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶಕ್ಕೆ ಕೇಂದ್ರದಿಂದ ಮುಂದಿನ ತಿಂಗಳ ಜಿಎಸ್​ಟಿ ಪಾಲನ್ನು ಮುಂಗಡವಾಗಿ ಸೇರಿಸಿ ಕೊಡಲಾಗಿದೆ.

ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ರೂ. ಪೈಕಿ ಕರ್ನಾಟಕಕ್ಕೆ 4,314 ರೂ, ಮಹಾರಾಷ್ಟ್ರ ರಾಜ್ಯಕ್ಕೆ ಸಿಕ್ಕಿರುವುದು 7,472 ಕೋಟಿ ರೂ ನೀಡಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ. ಇನ್ನು ಉತ್ತರಪ್ರದೇಶಕ್ಕೆ  21,218 ಕೋಟಿ ರೂ ಜಿಎಸ್ ಟಿ ಪಾಲು ಸಿಕ್ಕಿದೆ.

ವಿವಿಧ ರಾಜ್ಯಗಳಿಗೆ ಬಿಡುಗಡೆಯಾಗಿರುವ ಜಿಎಸ್ ಟಿ ಪಾಲು ಹೀಗಿದೆ ನೋಡಿ..

ಉತ್ತರಪ್ರದೇಶ: 21,218 ಕೋಟಿ ರೂ.

ಬಿಹಾರ: 11,897 ಕೋಟಿ ರೂ.

ಮಧ್ಯಪ್ರದೇಶ: 9,285 ಕೋಟಿ ರೂ.

ಪಶ್ಚಿಮ ಬಂಗಾಳ: 8,898 ಕೋಟಿ ರೂ.

ಮಹಾರಾಷ್ಟ್ರ: 7,472 ಕೋಟಿ ರೂ.

ರಾಜಸ್ಥಾನ್: 7,128 ಕೋಟಿ ರೂ.

ಒಡಿಶಾ: 5,356 ಕೋಟಿ ರೂ.

ತಮಿಳುನಾಡು: 4,825 ಕೋಟಿ ರೂ.

ಆಂಧ್ರಪ್ರದೇಶ: 4,787 ಕೋಟಿ ರೂ.

ಕರ್ನಾಟಕ: 4,314 ಕೋಟಿ ರೂ.

ಗುಜರಾತ್: 4,114 ಕೋಟಿ ರೂ.

ಛತ್ತೀಸ್​ಗಡ: 4,030 ಕೋಟಿ ರೂ.

ಜಾರ್ಖಂಡ್: 3,912ಕೋಟಿ ರೂ.

ಅಸ್ಸಾಮ್: 3,700 ಕೋಟಿ ರೂ.

ತೆಲಂಗಾಣ: 2,486 ಕೋಟಿ ರೂ.

ಕೇರಳ: 2,277 ಕೋಟಿ ರೂ.

ಪಂಜಾಬ್: 2,137 ಕೋಟಿ ರೂ.

ಅರುಣಾಚಲಪ್ರದೇಶ: 2,078 ಕೋಟಿ ರೂ.

ಉತ್ತರಾಖಂಡ್: 1,322 ಕೋಟಿ ರೂ.

ಹರ್ಯಾಣ: 1,293 ಕೋಟಿ ರೂ.

ಹಿಮಾಚಲಪ್ರದೇಶ: 982 ಕೋಟಿ ರೂ.

ಮೇಘಾಲಯ: 907 ಕೋಟಿ ರೂ.

ಮಣಿಪುರ: 847 ಕೋಟಿ ರೂ.

ತ್ರಿಪುರಾ: 837 ಕೋಟಿ ರೂ.

ನಾಗಾಲ್ಯಾಂಡ್: 673 ಕೋಟಿ ರೂ.

ಮಿಝೋರಾಂ: 591 ಕೋಟಿ ರೂ.

ಸಿಕ್ಕಿಂ: 459 ಕೋಟಿ ರೂ.

ಗೋವಾ: 457 ಕೋಟಿ ರೂ.

Key words: central government -released – GST -share – states.