ಸರ್ಕಾರಿ ಶಾಲಾ ಮಕ್ಕಳಿಗೆ ‘ಕಲಿಸು ಫೌಂಡೇಶನ್’ ಆಸರೆ: ಲೈಬ್ರರಿ ಮತ್ತು ಪ್ಲೇ ಏರಿಯಾ ಉದ್ಘಾಟನೆ.

ಮೈಸೂರು,ಜೂನ್,12,2023(www.justkannada.in):   ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಸಂದರ್ಭದಲ್ಲಿ  ಸರ್ಕಾರಿ ಶಾಲೆಗಳನ್ನು ಸಧೃಡಗೊಳಿಸಲು , ಶಿಕ್ಷಣ ಕ್ಷೇತ್ರದಲ್ಲಿ ಬಲಗೊಳಿಸಲು ಟೊಂಕ‌ಕಟ್ಟಿ‌ನಿಂತಿರುವುದು ಕಲಿಸು ಫೌಂಡೇಶನ್..

ಉತ್ತಮ ಭಾರತಕ್ಕೆ ಶಿಕ್ಷಣವೊಂದೇ ದಾರಿ ಮತ್ತು ಈ ಬದಲಾವಣೆಯನ್ನು ತರುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ರೂಪಿಸುತ್ತ ಬಂದಿರುವ ಕಲಿಸು ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ,

ಇಂದು ಕಲಿಸು ಫೌಂಡೇಶನ್ ವತಿಯಿಂದ ಕೀಳನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ 90ನೇ ಲೈಬ್ರರಿ ಮತ್ತು ಪ್ಲೇ ಏರಿಯಾವನ್ನು ಉದ್ಘಾಟಿಸಲಾಯಿತು.

ವರುಣ ಕ್ಷೇತ್ರದ ಕೀಳನಪುರ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಸುತ್ತೂರು ಕ್ಷೇತ್ರ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಮೈಸೂರು ರಾಜವಂಶಸ್ಥ ಹಾಗೂ ಕಲಿಸು ರಾಯಭಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದರು.

ಕಲಿಸು ಫೌಂಡೇಶನ್  ಸಂಸ್ಥೆಯು  ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಅವರ ಸಾಮರ್ಥ್ಯವನ್ನು ಉತ್ತಮಗೊಳಿಸಲು ಆಟದ ಜೊತೆಗೆ ಗ್ರಂಥಾಲಯಗಳನ್ನು ನಿರ್ಮಿಸುವ ಮೂಲಕ ಅವರ ಜೀವನವನ್ನು ಪರಿವರ್ತಿಸುವ ಪ್ರಯುತ್ನ ಮಾಡುತ್ತ ಬಂದಿದೆ.

ಇದೆ ಮೊದಲ ಬಾರಿಗೆ ಸುತ್ತೂರು ಸ್ವಾಮೀಜಿ ಮತ್ತು ಯದುವೀರ್ ಕೃಷ್ಣ ದತ್ತ ಒಡೆಯರ್ ಒಟ್ಟಿಗೆ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು ಅವರನ್ನು ಕಂಡು ಇಡೀ ಗ್ರಾಮದ ವಿದ್ಯಾರ್ಥಿಗಳು ಹಾಗೂ ಜನರು ಪುಳಕಿತರಾದರು, ಹಾಗೇಯೆ ಅವರನ್ನು  ಪೂರ್ಣ ಕುಂಭಾಬಿಷೇಕದೊಂದಿಗೆ ಬರ ಮಾಡಿಕೊಳ್ಳಲಾಯಿತು.

ಸುಮಾರು 1500ಕ್ಕೂ ಹೆಚ್ಚು ಅಕ್ಕಪಕ್ಕದ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಇದೆ ಸಂಧರ್ಭದಲ್ಲಿ  ವರುಣ ಕ್ಷೇತ್ರದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಕಲಿಸು ಫೌಂಡೇಶನ್ ಸಂಸ್ಥಾಪಕ ನಿಖಿಲೇಶ್ ಎಂ ಎಂ, ಡಿಡಿಪಿಐ, ರಾಮಚಂದ್ರರಾಜೇ ಅರಸು , ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಶಿವರಾಜು ಪಿ , ಗಿರೀಶ್ ರಾಮಸ್ವಾಮಿ, ಕೆ.ಎಸ್ .ಶಿವರಾಮ್, ವರುಣ ಮಹೇಶ್ ,  ಸೇರಿದಂತೆ ಹಲವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Key words: Kalisu Foundation -Support -Govt School- Children-mysore