ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಬೆಂಗಳೂರು, ಆಗಸ್ಟ್ 14, 2022 (www.justkannada.in): ಪೊಲೀಸರ ಗಣನೀಯ ಸೇವೆಗೆ ನೀಡುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ಪದಕ ಲಭಿಸಿದೆ.

ದೇಶದ ವಿವಿಧ ರಾಜ್ಯಗಳ ಪೊಲೀಸ್​ ಸಿಬ್ಬಂದಿ ಪದಕಗಳನ್ನು ಪಡೆದಿದ್ದು, ಈ ಸಂಬಂಧ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

ಪದಕ ಪಡೆದ ರಾಜ್ಯದ ಅಧಿಕಾರಿಗಳ ಪಟ್ಟಿ ಇಲ್ಲಿದೆ ನೋಡಿ…

 1. ನಂಜಪ್ಪ ಶ್ರೀನಿವಾಸ್, ಎಸ್‌ಪಿ ಮತ್ತು ಪ್ರಿನ್ಸಿಪಲ್ ಪೊಲೀಸ್ ತರಬೇತಿ ಶಾಲೆ ಕಡೂರು.
 2. ಪ್ರತಾಪ್ ಸಿಂಗ್ ತುಕರಾಮ್ ತೋರಾಟ್, ಡಿವೈಎಸ್ ಪಿ, ಐಎಸ್ ಡಿ.(DYSP-ISD)
 3. ನಂಬೂರು ಶ್ರೀನಿವಾಸ್ ರೆಡ್ಡಿ, ಡಿವೈಎಸ್ ಪಿ, ಸಿಐಡಿ ಫಾರೆಸ್ಟ್ ಸೆಲ್
 4. ನರಸಿಂಹಮೂರ್ತಿ ಪಿಳ್ಳಮುನಿಯಪ್ಪ, ಡಿವೈಎಸ್ ಪಿ ಸಿಐಡಿ (DYSP-CID)
 5. ಪ್ರಕಾಶ್ .ಆರ್, ಡಿವೈಎಸ್ ಪಿ ಎಸಿಬಿ (ACB)
 6. ಶಿವಕುಮಾರ್ ಟಿ ಎಂ, ಎಸಿಪಿ ಸುಬ್ರಮಣ್ಯಪುರ ಬೆಂಗಳೂರು
 7. ಝಾಕೀರ್ ಹುಸೇನ್, ಎಸಿಪಿ ಕಲಬುರಗಿ ಉಪವಿಭಾಗ
 8. ರಾಘವೇಂದ್ರ ರಾವ್, ಎಸಿಪಿ, ಬೆರಳಚ್ಚು ವಿಭಾಗ ಬೆಂಗಳೂರು
 9. ರಾಜಚಿಕ್ಕಹನುಮೇಗೌಡ, ಇನ್ಸ್‌ಪೆಕ್ಟರ್ ವಿದ್ಯಾರಣ್ಯಪುರ ಮೈಸೂರು
 10. ಡಿ ಬಿ ಪಾಟೀಲ್, ಸರ್ಕಲ್ ಇನ್ಸ್‌ಪೆಕ್ಟರ್, ವಿಜಯಪುರ ರೈಲ್ವೆ
 11. ಮಹಮ್ಮದ್ ಅಲಿ, ಇನ್ಸ್‌ಪೆಕ್ಟರ್ ಎಸಿಬಿ (ACB)
 12. ರವಿ ಬೆಳವಾಡಿ, ಇನ್ಸ್‌ಪೆಕ್ಟರ್ ಶೃಂಗೇರಿ ಪೊಲೀಸ್ ಠಾಣೆ
 13. ಮುಪೀದ್ ಖಾನ್, ಸ್ಪೆಷಲ್ ಆರ್ ಪಿಐ, ಕೆಎಸ್‌ಆರ್ ಪಿ(KSRP)
 14. ಮುರಳಿ ರಾಮಕೃಷ್ಣಪ್ಪ, ಸ್ಪೆಷಲ್ ಎಆರ್ ಎಸ್‌ಐ, ಕೆಎಸ್‌ಆರ್ ಪಿ (KSRP)
 15. ಮಹದೇವಯ್ಯ, ಎಆರ್ ಎಸ್‌ಐ ಕೆಎಸ್‌ಆರ್ ಪಿ (KSRP)
 16. * ಡಿ.ಬಿ. ಶಿಂಧೆ, ಎಎಸ್‌ಐ ಬೆಳಗಾವಿ ಸ್ಪೆಷಲ್ ಬ್ರಾಂಚ್
 17. ರಂಜಿತ್ ಶೆಟ್ಟಿ, ಎಎಸ್‌ಐ ಕೆಂಪೇಗೌಡನಗರ ಪೊಲೀಸ್ ಠಾಣೆ
 18. ಬಸವರಾಜು .ಬಿ, ಸ್ಪೆಷಲ್ ಎಆರ್ ಎಸ್‌ಐ (ARSI) ರಾಜ್ಯ ಗುಪ್ತದಳ