ದೇಶದಾದ್ಯಂತ 24 ಗಂಟೆಗಳ ಅವಧಿಯಲ್ಲಿ 14,092 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಆಗಸ್ಟ್ 14, 2022 (www.justkannada.in): ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 14,092 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಈ ಕುರಿತು ಬುಲೆಟಿನ್ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ದೇಶದಲ್ಲಿ ಒಟ್ಟು ಕೋವಿಡ್ ಸಕ್ರಿಯ ಪ್ರಕರಣಗಳು 1,16,861ಕ್ಕೆ ಇಳಿಕೆಯಾಗಿವೆ ಎಂದು ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ 41 ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ ಕೇರಳವೊಂದರಲ್ಲೇ 12 ಜನರು ಸಾವಿಗೀಡಾಗುವ ಮೂಲಕ ದೇಶದಲ್ಲಿ ಈವರೆಗೆ 5,27,037 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಒಟ್ಟು ಸೊಂಕು ಪ್ರಕರಣಗಳ ಪೈಕಿ ಶೇ 0.26ರಷ್ಟು ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕು ಪ್ರಕರಣಗಳು 4,42,53,464ಕ್ಕೆ ಏರಿಕೆಯಾಗಿದೆ. 4,36,09,566 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ದೇಶದಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದ ಅಂಗವಾಗಿ ಈವರೆಗೆ ದೇಶದಲ್ಲಿ 207.99 ಕೋಟಿ ಕೋವಿಡ್ ವಿರುದ್ಧದ ಲಸಿಕಾ ಡೋಸ್‌ಗಳನ್ನು ವಿತರಿಸಲಾಗಿದೆ.