“ರಾಜ್ಯದಲ್ಲಿ ಈಗ ಸಿಡಿ ಕಾಲ ಬಂದಿದೆ. ಇನ್ನಷ್ಟು ಸಿಡಿ ಇದ್ದರೇ ಬಿಡುಗಡೆ ಆಗಲಿ” : ಎಂ ಎಲ್ ಸಿ ಎಚ್.ವಿಶ್ವನಾಥ್

ಮಡಿಕೇರಿ,ಮಾರ್ಚ್,21,2021(www.justkannada.in) : ಕರ್ನಾಟಕ ಸರ್ಕಾರದಲ್ಲಿ  ಒಮ್ಮೊಮ್ಮೆ ಒಂದೊಂದು ಕಾಲ. ಒಮ್ಮೆ  ಮಳೆಗಾಲ, ಒಮ್ಮೆ ಚಳಿಗಾಲ, ಈಗ ರಾಜ್ಯದಲ್ಲಿ ಸಿಡಿ ಕಾಲ ಬಂದಿದೆ. ಇನ್ನಷ್ಟು ಸಿಡಿ ಇದ್ದರೇ ಬಿಡುಗಡೆ ಆಗಲಿ ಎಂದು ಎಂ ಎಲ್ ಸಿ ಎಚ್.ವಿಶ್ವನಾಥ್ ಹೇಳಿದ್ದಾರೆ.jkಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಿ.ಡಿ.ಕಾರ್ಪೋರೇಷನ್ ಆಗ್ತಿದೆ. ಸಿಡಿ ವಿಚಾರಕ್ಕೂ, ಬಾಂಬೆ ಟೀಂ ಗೂ ಸಂಬಂಧವಿಲ್ಲ. ಇನ್ನಷ್ಟು ಸಿಡಿಗಳಿವೆ ಎನ್ನಲಾಗುತ್ತಿದೆ. ಅವುಗಳನ್ನು ಬಿಡುಗಡೆ ಮಾಡಲಿ ಎಂದಿದ್ದಾರೆ.

ಲಾಕ್ ಡೌನ್ ಆದ್ರೆ ಸಮಸ್ಯೆ ಎದುರಿಸಬೇಕಾಗುತ್ತದೆ

CD,now,state,Will,release,more,CDs,MLC,H.VISHWANATH 

ಸದ್ಯಕ್ಕೆ ಲಾಕ್ ಡೌನ್ ಆಗೋದು ಬೇಡ. ಲಾಕ್ ಡೌನ್ ಆದ್ರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಲಾಕ್ ಡೌನ್ ಬದಲು ಸೂಕ್ತ ಕ್ರಮ ಕೈಗೊಳ್ಳಲಿ. ಈಗ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

key words : CD-now-state-Will-release-more-CDs-MLC-H.VISHWANATH