Sunday, August 23, 2026

BDA Apartments

Home Front Page ರಾಜ್ಯದ ಜನರ ಜೀವದ ಜೊತೆ ಸಚಿವರು ಚೆಲ್ಲಾಟವಾಡುತ್ತಿದ್ದಾರೆ- ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ.

ರಾಜ್ಯದ ಜನರ ಜೀವದ ಜೊತೆ ಸಚಿವರು ಚೆಲ್ಲಾಟವಾಡುತ್ತಿದ್ದಾರೆ- ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ.

ರಾಮನಗರ,ಸೆಪ್ಟಂಬರ್,19,2023(www.justkannada.in):  ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡಲು CWMA ಆದೇಶ ವಿಚಾರ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು  ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನೀರು ಹರಿಸದಿದ್ರೆ ಆದೇಶ ಉಲ್ಲಂಘನೆ ಅಂತಾ ಸಚಿವರು ಹೇಳಿದ್ದಾರೆ. ಜಲಸಂಪನ್ಮೂಲ ಸಚಿವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹಿಂದಿನ ಸರ್ಕಾರ ನೀರು ಬಿಟ್ಟಿಲ್ಲ ಅಂತಾ ಹೇಳಬಹುದು. ಹೌದು ನೀರು ಬಿಟ್ಟಿದ್ದಾರೆ ಅನಿವಾರ್ಯತೆ ಇದೆ ಅದನ್ನು ಒಪ್ಪುತ್ತೇನೆ. ಆದರೆ ಮಳೆ ಕೊರತೆಯಿಂದ ನಮ್ಮ ರೈತರ ಬೆಳೆ ನಾಶವಾಗುತ್ತಿದೆ. ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ ಹೀಗಿದ್ದು ನೀರು ಬಿಡುವುದು ಸರಿಯಲ್ಲ ಎಂದು ಕಿಡಿಕಾರಿದರು.

 

 

ಕಾವೇರಿ ನದಿ ಸಂಬಂಧ ಸಭೆಗಳಲ್ಲಿ ತಮಿಳುನಾಡಿನ 10-15 ಅಧಿಕಾರಿಗಳು ಭಾಗಿಯಾಗ್ತಾರೆ. ಆದರೆ ನಮ್ಮ ಅಧಿಕಾರಿಗಳು ಒಬ್ಬರೋ ಇಬ್ಬರೂ ಕಾಟಾಚಾರಕ್ಕೆ ಭಾಗಿಯಾಗುತ್ತಿದ್ದಾರೆ ಎಂದು ಹೆಚ್.ಡಿಕೆ ಹರಿಹಾಯ್ದರು.

Key words: cavery- water-tamilnadu-DK Shivakumar-HD Kumaraswamy