ತಮಿಳುನಾಡು ಮನವಿ ತಿರಸ್ಕರಿಸಿದ್ದು ಬಹಳ ಸಂತಸ: ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ-ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಸೆಪ್ಟಂಬರ್,26,2023(www.justkannada.in):  ಇಂದು ನಡೆದ CWRC  ಸಭೆಯಲ್ಲಿ ತಮಿಳುನಾಡು 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕೇಳಿತ್ತು. ಆದರೆ ಸಮಿತಿಯನ್ನು ಇದನ್ನು ತಿರಸ್ಕರಿಸಿದ್ದು ಬಹಳ ಸಂತಸವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ತಿಳಿಸಿದರು.

ಇಂದು ನಡೆದ ಸಭೆಯಲ್ಲಿ ತಮಿಳುನಾಡಿಗೆ 18 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿರುವ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಸಮಿತಿಯು ತಮಿಳುನಾಡು ಮನವಿಯನ್ನ ತಿರಸ್ಕರಿಸಿದೆ. ಇದರಿಂದಾಗಿ ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ. ತಮಿಳುನಾಡಿಗೆ ಮಾಮೂಲಿ ಎರಡು ಸಾವಿರ ಕ್ಯೂಸೆಕ್ ನೀರು ಹೋಗುತ್ತಿರುತ್ತದೆ. ಅದರ ಜೊತೆ ಇನ್ನೊಂದು ಅಥವಾ ಎರಡು ಸಾವಿರ ಕ್ಯೂಸೆಕ್ ಹರಿಸಬೇಕಾಗುತ್ತದೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಚೆನ್ನಾಗಿದೆ, ಸಮಸ್ಯೆಯಿಲ್ಲ ಎಂದರು.

ಇನ್ನು ಬಂದ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಬಂದ್ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಹಾನಿಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಾಸಕರು ಸೇರಿದಂತೆ ಯಾರೇ ಹಾನಿ ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Key words: caveri dispute-Tamil Nadu – request- rejected- Happy- DCM DK Shivakumar.