Monday, September 28, 2026

BDA Apartments

ಕಾವೇರಿ ಕೊಳ್ಳದ ರೈತರಲ್ಲಿ ಆತಂಕ: ಇಂದು ಸಹ ತಮಿಳುನಾಡಿಗೆ ಹರಿದ ನೀರು BDA JK_Adv BDA Adv
Home Front Page ಕಾವೇರಿ ಕೊಳ್ಳದ ರೈತರಲ್ಲಿ ಆತಂಕ: ಇಂದು ಸಹ ತಮಿಳುನಾಡಿಗೆ ಹರಿದ ನೀರು.

ಕಾವೇರಿ ಕೊಳ್ಳದ ರೈತರಲ್ಲಿ ಆತಂಕ: ಇಂದು ಸಹ ತಮಿಳುನಾಡಿಗೆ ಹರಿದ ನೀರು.

ಮಂಡ್ಯ,ಆಗಸ್ಟ್,22,2023(www.justkannada.in):  ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಯಾವುದೇ ಡ್ಯಾಂಗಳು ಭರ್ತಿಯಾಗಿಲ್ಲ. ಈ ಮಧ್ಯೆಯೂ ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಇಂದು ಸಹ ಹರಿದಿದೆ.

ಕೆಆರ್ ಎಸ್ ಡ್ಯಾಂ ಭರ್ತಿಯಾಗದಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ರೈತ ಸಂಘಟನೆಗಳು ಮತ್ತು ಬಿಜೆಪಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಸಹ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರೆದಿದೆ.

ಇಂದು 10841 ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಹರಿಸಲಾಗಿದೆ. ನಿನ್ನೆ 12,631 ಕ್ಯೂಸೆಕ್ ನೀರು ಹರಿಸಲಾಗಿತ್ತು. ಇಂದು 2 ಸಾವಿರ ಕ್ಯೂಸೆಕ್ ಕಡಿಮೆ ನೀರು ಹರಿಸಲಾಗಿದೆ. ಇನ್ನು ನಿನ್ನೆ 105 ಅಡಿ ಇದ್ದ ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಇಂದು 104ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ  ರಾಜ್ಯದಲ್ಲಿ ಕಾವೇರಿ ಕೊಳ್ಳದ ರೈತರಿಗೆ ಆತಂಕ ಶುರುವಾಗಿದೆ.

Key words: Cauvery Water -flowed -Tamil Nadu -farmer