ಜಾತಿ ಜನಗಣತಿ ವರದಿಯೇ ಹೊರಗೆ ಬಂದಿಲ್ಲ. ಆಗಲೇ ಸರಿ ಇಲ್ಲ ಅಂದ್ರೆ ಹೇಗೆ..? ಸಚಿವ ಕೆ.ಎನ್ ರಾಜಣ್ಣ ಅಸಮಾಧಾನ.

ತುಮಕೂರು,ನವೆಂಬರ್,22,2023(www.justkannada.in): ಜಾತಿ ಜನಗಣತಿ ವರದಿಯೇ ಹೊರಗೆ ಬಂದಿಲ್ಲ. ಆಗಲೇ ಸರಿ ಇಲ್ಲ ಅಂದರೆ ಹೇಗೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾತಿಗಣತಿ ಸ್ವೀಕಾರ ವಿರೋಧಿ ನಿಲುವಿಗೆ ಡಿಕೆ ಶಿವಕುಮಾರ್ ಸಹಿ ವಿಚಾರ ಕುರಿತು  ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ,  ಜಾತಿ ಗಣತಿ ಬಗ್ಗೆ ಬಹಳಷ್ಟು ಅಪಪ್ರಚಾರ ನಡೆಯುತ್ತಿದೆ. ಡಿಕೆ ಶಿವಕುಮಾರ್ ಸಮಾಜದ ಸಭೆಗೆ ಹೋಗಿದ್ದಾರೆ  ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ವರದಿ ಬಂದಾಕ್ಷಣ ಎಲ್ಲವೂ ತೀರ್ಮಾನ ಬರುತ್ತವೆ ಅಂತಲ್ಲ . ಸರ್ಕಾರ ಜನರ ಅಭಿಪ್ರಾಯ ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎನ್ ರಾಜಣ್ಣ, ಸಿಎಂ ಸ್ಥಾನ ಇನ್ನೂ ಖಾಲಿ  ಇಲ್ಲ. ಹೀಗಾಗಿ ಪ್ರಶ್ನೆ ಉದ್ಬವಿಸಲ್ಲ.  ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಹೈಕಮಾಂಡ್ ಹೇಳಿದ್ರೆ ಮಾಡೋಣ ಸತೀಶ್ ರನ್ನ ಹೇಳಿದ್ರೆ ಅವರನ್ನೇ ಸಿಎಂ ಮಾಡೋಣ.  ಪರಮೇಶ್ವರ್ ಮತ್ತು ಹೆಚ್.ಕೆ ಪಾಟೀಲರನ್ನ ಸಿಎಂ ಮಾಡಲು ಹೇಳಿದ್ರೆ  ಅವರನ್ನೇ ಸಿಎಂ ಮಾಡೋಣ ಎಂದರು.

Key words: caste census- report – not come –Minister- KN Rajanna