Sunday, August 9, 2026

BDA Apartments

Home Front Page ಜಾತಿಗಣತಿ ವರದಿ ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ- ‘ಕೈ’ ಶಾಸಕ ಎಸ್.ಆರ್ ಶ್ರೀನಿವಾಸ್ ಆಗ್ರಹ

ಜಾತಿಗಣತಿ ವರದಿ ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ- ‘ಕೈ’ ಶಾಸಕ ಎಸ್.ಆರ್ ಶ್ರೀನಿವಾಸ್ ಆಗ್ರಹ

ತುಮಕೂರು,ಅಕ್ಟೋಬರ್,9,2024 (www.justkannada.in): ಜಾತಿ ಜನಗಣತಿ ವರದಿ ಬಿಡುಗಡೆಗೆ ಸ್ವಪಕ್ಷದಿಂದಲೇ ಅಪಸ್ವರ ಕೇಳಿ ಬಂದಿದ್ದು ವರದಿಯನ್ನ ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಎಸ್.ಆರ್ ಶ್ರೀನಿವಾಸ್,  ಜಾತಿಗಣತಿ ಮೇಲ್ನೋಟಕ್ಕೆ ಇದು ಅವೈಜ್ಞಾನಿಕವಾಗಿದೆ.  ಜಾತಿಗಣತಿ ಸರ್ವೆ ಸರಿಯಾದ ರೀತಿಯಲ್ಲಿ ಆಗಿಲ್ಲ.  ನಮ್ಮ ಜನಾಂಗಕ್ಕೆ ಅನ್ಯಾಯವಾಗಿದೆ.  ನಮ್ಮ ಒಕ್ಕಲಿಗ ಸಮುದಾಯದಲ್ಲಿ ಅನೇಕ ಒಳಪಂಗಡಗಳಿವೆ. ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಬೇಕು

ನಮ್ಮಲ್ಲಿ ವಿರೋಧ ಯಾಕೆ ಅಂದರೆ ಒಕ್ಕಲಿಗೆ ಅಂತಾ ಒಟ್ಟಿಗೆ ಮಾಡಲಿ. ಜಾತಿ ಗಣತಿ ವರದಿಯನ್ನು ಮತ್ತೊಮ್ಮೆ ತಯಾರು ಮಾಡಲಿ ಜಾತಿಗಣತಿ ವರದಿ ರೆಡಿ ಮಾಡಿ ಆ ನಂತರ ಬಿಡುಗಡೆ ಮಾಡಲಿ  ಎಂದು ಎಸ್ ಆರ್ ಶ್ರೀನಿವಾಸ್ ಆಗ್ರಹಿಸಿದರು.

Key words: caste census, report, MLA, SR Srinivas