ಹುಲಿ, ಚರ್ಮ, ಉಗುರು, ಮಾರಾಟಕ್ಕೆ ಯತ್ನ ಪ್ರಕರಣ: ಬಂಧಿತರಿಂದ ಕ್ಯಾಮರಾ, ಗಂಧದ ತುಂಡು ಜಪ್ತಿ

ಬೆಂಗಳೂರು, ಫೆಬ್ರವರಿ 20, 2022 (www.justkannaa.in): ಹುಲಿ, ಚರ್ಮ, ಉಗುರು, ಮಾರಾಟಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿ ಹತ್ಯೆಗೆ ಬಳಸಲಾದ ಬಂದೂಕುಗಳು, ಬಾಕಿ ಉಗುರುಗಳು, ಹುಲಿ ಗಣತಿ ಸಮಯದಲ್ಲಿ ಕಳವಾಗಿದ್ದ ಕ್ಯಾಮರ, ಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿದೆ.

ಹುಲಿ ಚರ್ಮ ಉಗುರುಗಳನ್ನು ಸಾಗಿಸಲು ಉಪಯೋಗಿಸಿದ್ದ ಸ್ಕೂಟರ್ ಕಾರು ವಶಕ್ಕೆ ಪಡೆಯಲಾಗಿದೆ. ಮಣ್ಣಿನಡಿಯಲ್ಲಿ ಅಡಗಿಸಿಟ್ಟಿದ್ದ ಹುಲಿಯ ತಲೆ ಬುರುಡೆ, ಹುಲಿ ಮೂಳೆಯನ್ನೂ ವಶಕ್ಕೆ ಪಡೆಯಲಾಗಿದೆ.

ಮೂರು ದಿನಗಳ ಹಿಂದೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಮೈಸೂರು ಅರಣ್ಯ ಸಂಚಾರಿ ದಳದ ಪೊಲೀಸರು ಪಿರಿಯಾಪಟ್ಟಣ ತಾಲೂಕಿನ ಮಾಲ್ದಾರೆ ಗ್ರಾಮದ ಗೋವಿಂದ, ಗೋಪಾಲ, ಲಿಂಗ, ಬಸವರನ್ನು ಬಂಧಿಸಿದ್ದರು.

ಬಂಧಿತ ಆರೋಪಿಗಳು ಹುಲಿಯ ಚರ್ಮ, ಉಗುರು ಕಾಲು ಮೀಸೆ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಲೆಗೆ ಬಿದ್ದಿದ್ದರು.