ಶವ ಸಾಗಿಸುತ್ತಿದ್ದಾಗ ಕಾರಿನ ಟೈರ್ ಸ್ಪೋಟ: ಮೂವರು ಸ್ಥಳದಲ್ಲೇ ಸಾವು.

ಚಿತ್ರದುರ್ಗ,ಜನವರಿ,19,2024(www.justkannada.in):  ಕುಟುಂಬಸ್ಥರು ವೃದ್ದೆಯ ಶವ ಸಾಗಿಸುತ್ತಿದ್ದ ವೇಳೆ ಕಾರಿನ ಟೈರ್ ಸ್ಪೋಟಗೊಂಡು  ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಬಳಿ ನಡೆದಿದೆ.

ರಾಂಪುರ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಈ ಘಟನೆ ನಡೆದಿದೆ. ಸುರೇಶ್ (40),  ಮಲ್ಲಿಕಾರ್ಜುನ (25), ಭೂಮಿಕಾ (9) ಮೃತಪಟ್ಟವರು. ಘಟನೆಯಲ್ಲಿ ನಾಗಮ್ಮ, ತಾಯಮ್ಮ, ಧನಂಜಯ್ ಹಾಗೂ ಕಾರು ಚಾಲಕ ಶಿವು ಸ್ಥಿತಿ ಗಂಭೀರವಾಗಿದ್ದು ರಾಂಪುರ ಆಸ್ಪತ್ರೆಗ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರು ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ದೇಸನೂರು ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದ ವೃದ್ಧೆ ಹುಲಿಗೆಮ್ಮ(66)ಶವವನ್ನ ಬೆಂಗಳೂರಿನಿಂದ ಸಿರಗುಪ್ಪದ ದೇಸನೂರಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Car -tire -burst – carrying- dead body- Three died -on the spot.