ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ: ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡ ನಟ ರಿಷಬ್ ಶೆಟ್ಟಿ.

ಬೆಂಗಳೂರು,ಜನವರಿ,20,2024(www.justkannada.in): ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದ್ದು ಹಲವು ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರನ್ನೂ ಆಹ್ವಾನಿಸಲಾಗಿದೆ.

ಅಯೋಧ್ಯೆಯಿಂದ ಬಂದ ಆಹ್ವಾನ ಪತ್ರಿಕೆಯನ್ನು ರಿಷಬ್ ಶೆಟ್ಟಿ ಸ್ವೀಕರಿಸಿದ್ದಾರೆ. ಈ ಸಂದರ್ಭದ ಫೋಟೋವನ್ನು ಅವರು  ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ಇಂಥ ಮಹತ್ವದ ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ಬಹಳ ಖುಷಿ ಆಗಿದೆ. ‘ಶ್ರೀರಾಮ ಜಯ ರಾಮ ಜಯ ಜಯ ರಾಮ. ಬಾಲ್ಯದಿಂದಲೂ ನಮ್ಮ ಮನೆಗಳಲ್ಲಿ ರಾಮನಾಮವ ಭಜಿಸುತ್ತಾ, ರಾಮ ಪ್ರೇಮವ ಭುಜಿಸುತ್ತಾ, ಆತನ ಆದರ್ಶಪ್ರಾಯ ಜೀವನದ ಕಥೆಗಳನ್ನು ಗುರು ಹಿರಿಯರಿಂದ ಕೇಳುತ್ತಾ ಬೆಳೆದವರು ನಾವು. ಇಂದು ಆ ಶ್ರೀರಾಮ ತಾನು ಮಗುವಾಗಿ ಆಡಿದ, ಪ್ರಭುವಾಗಿ ಆಳಿದ ಆ ಅಯೋಧ್ಯೆಗೆ ಬರುವಂತೆ ಕರೆ ಕಳಿಸಿದ್ದಾನೆ. ಇದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ! ಶ್ರೀರಾಮನಿಗೆ ಜಯವಾಗಲಿ, ಅಯೋಧ್ಯೆಗೆ ಜಯವಾಗಲಿ’ ಎಂದು ತಿಳಿಸಿದ್ದಾರೆ.

Key words: Invitation – Ram Mandir- inauguration – Actor- Rishabh Shetty – happiness