Wednesday, August 12, 2026

BDA Apartments

Home Front Page ಖಾತೆ ಹಂಚಿಕೆ ಕೆಲಸ ಸುಲಭವಲ್ಲ- ಸಚಿವರ ಅಸಮಾಧಾನ ಕುರಿತು ಸಿಎಂ ಬಿಎಸ್ ವೈ ಪ್ರತಿಕ್ರಿಯಿಸಿದ್ದು...

ಖಾತೆ ಹಂಚಿಕೆ ಕೆಲಸ ಸುಲಭವಲ್ಲ- ಸಚಿವರ ಅಸಮಾಧಾನ ಕುರಿತು ಸಿಎಂ ಬಿಎಸ್ ವೈ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಜನವರಿ,21,2021(www.justkannada.in) ಸಂಪುಟ ರಚನೆ ಮಾಡುವುದು, ಖಾತೆ ಹಂಚುವ ಕೆಲಸ ಸುಲಭವಲ್ಲ. ಸದ್ಯ ಖಾತೆ ಹಂಚಿಕೆ ಸಂಬಂಧ ಸಚಿವರಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.jk

ನೂತನ ಸಚಿವರಿಗೆ ಖಾತೆ ಹಂಚಿಕೆ, ಹಾಲಿ ಸಚಿವರ ಖಾತೆ ಬದಲಾವಣೆ ಬಳಿಕ ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಎಲ್ಲರ ಜತೆ ಮಾತನಾಡಿದ್ದೇನೆ. ಖಾತೆ ಹಂಚಿಕೆ ಸಂಬಂಧ ಸಚಿವರಿಗೆ ಯಾವುದೇ  ಅಸಮಾಧಾನವಿಲ್ಲ. ಎಲ್ಲಾ ಸಚಿವರು ಸಮಾಧಾನವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸಚಿವ ಸ್ಥಾನ ಹಂಚಿಕೆ ಮಾಡೋದು ಸುಲಭದ ಕೆಲಸವಲ್ಲ. ಎಲ್ಲರನ್ನೂ ತೃಪ್ತಿಪಡಿಸಿವುದು ಸುಲಭವಲ್ಲ. ಈಗ ಕೊಟ್ಟಿರುವ ಖಾತೆಗಳನ್ನ ಸಚಿವರು ನಿಭಾಯಿಸಲಿ. ಅವರು ಈಗ ನೀಡಿದ ಖಾತೆಯಲ್ಲಿ ಸ್ವಲ್ಪ ದಿವಸ ಕೆಲಸ ಮಾಡಲಿ. ಈಗ ಕೊಟ್ಟಿರುವ ಖಾತೆಗಳಲ್ಲಿ ಸಮಾಧಾನವಿಲ್ಲದಿದ್ದರೇ   ಮುಂದಿನ ದಿನಗಳಲ್ಲಿ ಉತ್ತಮ ಖಾತೆ ನೀಡೋಣ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.cabinet – restructure- work - not easy- CM BS yeddyurappa

ನೂತನ ಸಚಿವರಿಗೆ ಖಾತೆ ಹಂಚಿಕೆ ಮತ್ತು ಹಲವು ಸಚಿವರ ಖಾತೆಗಳನ್ನ  ಸಿಎಂ ಯಡಿಯೂರಪ್ಪ ಅದಲು ಬದಲುಮಾಡಿದ್ದರು.  ಈ ಮಧ್ಯೆ ಸಚಿವರಾದ ಜೆ.ಸಿ ಮಾಧುಸ್ವಾಮಿ, ಎಂಟಿಬಿ ನಾಗರಾಜ್, ಗೋಪಾಲಯ್ಯ ಸೇರಿ ಹಲವು ಸಚಿವರು ತಮ್ಮ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

 

Key words: cabinet – restructure- work – not easy- CM BS yeddyurappa