ವಿಶೇಷ ಅರಿವು ಕಾರ್ಯಕ್ರಮ: ವಾರದಲ್ಲಿ ಒಂದು ದಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಮೃಗಾಲಯ ಪ್ರವೇಶ….

ಮೈಸೂರು,ಜನವರಿ,21,2021(www.justkannada.in): ಮಕ್ಕಳಲ್ಲಿ ಪ್ರಾಣಿ ಸಂಕುಲದ ಅರಿವು ಮೂಡಿಸಲು ‌ಮೃಗಾಲಯ ಪ್ರಾಧಿಕಾರ ಚಿಂತನೆ ನಡೆಸಿದ್ದು, ಹೀಗಾಗಿ, ವಾರದಲ್ಲಿ ಒಂದು ದಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಮೃಗಾಲಯ ಪ್ರವೇಶ ಕಲ್ಪಸಲಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಅವರು, ಮಕ್ಕಳಲ್ಲಿ ಪ್ರಾಣಿ ಸಂಕುಲದ ಅರಿವು ಮೂಡಿಸಲು ಶಾಲಾ ಮಕ್ಕಳಿಗೆ ವಿಶೇಷ ಅರಿವು ಕಾರ್ಯಕ್ರಮ ಆಯೋಜನೆಗೆ ಚಿಂತನೆ ನಡೆಸಲಾಗಿದೆ. ಈ ಕಾರ್ಯಕ್ರಮದ ಮೂಲಕ ವಾರದಲ್ಲಿ ಒಂದು ದಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಮೃಗಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಪ್ರತೀ ವಾರ ಒಂದೊಂದು ಸರ್ಕಾರಿ ಶಾಲೆಗಳಿಗೆ ಮೃಗಾಲಯ ವೀಕ್ಷಣೆ ಅವಕಾಶ ನೀಡಲಾಗುತ್ತದೆ.Special awareness- program- government school -students -one day - Free-visit- zoo

ಮೃಗಾಲಯ ವೀಕ್ಷಣೆ ಬಳಿ 15ನಿಮಿಷಗಳ ಜಾಗೃತಿ ಕಾರ್ಯಗಾರ ಆಯೋಜನೆ ಮಾಡಲಾಗುವುದು. ಯೂತ್ ಕ್ಲಬ್ ಮೂಲಕ ಅರಿವು ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಗಿದ್ದು  ಮೈಸೂರಿನಿಂದಲೇ ಅರಿವು ಕಾರ್ಯಕ್ರಮ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ಮಾಹಿತಿ ನೀಡಿದರು.

Key words: Special awareness- program- government school -students -one day – Free-visit- zoo