Wednesday, August 12, 2026

BDA Apartments

Home Front Page ಸಚಿವ ಸಂಪುಟ ಸಭೆಗೆ ಎಂಟಿಬಿ ನಾಗರಾಜ್, ಗೋಪಾಲಯ್ಯ ಸೇರಿ ನಾಲ್ವರು ಸಚಿವರು ಗೈರು…

ಸಚಿವ ಸಂಪುಟ ಸಭೆಗೆ ಎಂಟಿಬಿ ನಾಗರಾಜ್, ಗೋಪಾಲಯ್ಯ ಸೇರಿ ನಾಲ್ವರು ಸಚಿವರು ಗೈರು…

ಬೆಂಗಳೂರು,ಜನವರಿ,21,2021(www.justkannada.in): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದ್ದು ಸಭೆಗೆ ಅಸಮಾಧಾನಿತ ನಾಲ್ವರು ಸಚಿವರು ಗೈರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.jk

ಅಸಮಾಧಾನಗೊಂಡಿರುವ  ನಾಲ್ವರು ಸಚಿವರಾದ ಸುಧಾಕರ್, ಎಂಟಿಬಿ ನಾಗರಾಜ್,ಗೋಪಾಲಯ್ಯ, ಜೆ.ಸಿ ಮಾಧುಸ್ವಾಮಿ ಸಚಿವ ಸಂಪುಟ ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ. ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ.

ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೂತನ 7 ಸಚಿವರಿಗೆ ಖಾತೆ ಹಂಚಿಕೆ ಜತೆಗೆ ಹಲವು ಸಚಿವರ ಖಾತೆ ಅದಲು ಬದಲು ಮಾಡಿದ್ದರು. ಇದರಿಂದಾಗಿ ಸುಧಾಕರ್, ಎಂಟಿಬಿ ನಾಗರಾಜ್,ಗೋಪಾಲಯ್ಯ, ಜೆ.ಸಿ ಮಾಧುಸ್ವಾಮಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಅಬಕಾರಿ ಖಾತೆ ನೀಡಿದ್ದಕ್ಕೆ ಗರಂ ಆಗಿದ್ದ ಸಚಿವೆಎಂಟಿಬಿ ನಾಗರಾಜ್, ಅಬಕಾರಿ ಖಾತೆಯಲ್ಲಿ ನಾನು ಮಾಡುವುದು ಏನು ಇಲ್ಲ. ಬಡವರಿಗಾಗಿ ಕೆಲಸ ಮಾಡುವ ಖಾತೆಯನ್ನ ನೀಡಬೇಕು ಎಂದಿದ್ದರು.

Key words: Four ministers- absent-cabinet meeting