Friday, September 4, 2026

BDA Apartments

Home Front Page ಮಾಸಾಶನ ವೃದ್ಧಾಪ್ಯ ವೇತನ ನೀಡುತ್ತಿಲ್ಲ: ಬಡವರಿಂದ ಸರ್ಕಾರ ದೂರ ಸಾಗುತ್ತಿದೆ- ಬಿವೈ ವಿಜಯೇಂದ್ರ

ಮಾಸಾಶನ ವೃದ್ಧಾಪ್ಯ ವೇತನ ನೀಡುತ್ತಿಲ್ಲ: ಬಡವರಿಂದ ಸರ್ಕಾರ ದೂರ ಸಾಗುತ್ತಿದೆ- ಬಿವೈ ವಿಜಯೇಂದ್ರ

ರಾಯಚೂರು,ಸೆಪ್ಟಂಬರ್,4,2026 (www.justkannada.in):  ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಂದ ದೂರ ಸಾಗುತ್ತಿದೆ. ಬಡವರನ್ನ ನಿರ್ಲಕ್ಷಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಇಂದು ಬಿಜೆಪಿಯ ನಾಲ್ಕನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಆರಂಭವಾಗಿದ್ದು ಈ ವೇಳೆ ಮಾತನಾಡಿದ ಬಿವೈ ವಿಜಯೇಂದ್ರ,    ರಾಜ್ಯದಲ್ಲಿರು ಬಡವರು ರಾಜ್ಯ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ವಿಕಲಚೇತನರಿಗೆ ಮಾಸಾಶನ ವೃದ್ಧಾಪ್ಯ ವೇತನವನ್ನೂ ಕೊಡುತ್ತಿಲ್ಲ.   ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಭ್ರಮೆಯಲ್ಲೇ ತೇಲುತ್ತಿದೆ.  ವಾಸ್ತವಿಕ ಸತ್ಯದಿಂದ ಸರ್ಕಾರ ದೂರ ಇದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದ ಪ್ರತಿಯೊಬ್ಬರೂ ಬೇಸತ್ತಿದ್ದಾರೆ. ಈ ಸರ್ಕಾರಕ್ಕೆ ಬಡವರಿಗೆ ಮನೆ ಕೊಡುವುದಕ್ಕೂ ಸಾಧ್ಯವಾಗುತ್ತಿಲ್ಲ.  ಸರ್ಕಾರ ಎಲ್ಲಾ ವರ್ಗದ ಜನರನ್ನು ನಿರ್ಲಕ್ಷದಿಂದ ನೋಡುತ್ತಿದೆ. ಎಂದು ಬಿವೈ ವಿಜಯೇಂದ್ರ ಹರಿಹಾಯ್ದರು.

Key words: congress, government, moving away, poor, BY Vijayendra