ಕಾರು ಸ್ಪೋಟ ಕೇಸ್: ಒಗ್ಗಟ್ಟು ಪ್ರದರ್ಶಿಸುವ ವೇಳೆ ‘ಕೈ’ ನಾಯಕರಿಂದ ಮನಬಂದಂತೆ ಮಾತು- ಬಿವೈ ವಿಜಯೇಂದ್ರ ಕಿಡಿ

ಶಿವಮೊಗ್ಗ,ನವೆಂಬರ್,13,2025 (www.justkannada.in):  ನವದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕತ್ತು. ಆದರೆ ಕಾಂಗ್ರೆಸ್ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಇದು  ಭಯೋತ್ಪಾದಕ ದಾಳಿ ಎಂದೇ ಹೇಳಬೇಕು. ಪ್ರಧಾನಿ ಮೋದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂಸತ್ ಭವನ, ರಾಷ್ಟ್ರಪತಿ ಭವನ, ಸೇನಾ ಕಚೇರಿ ಸೇರಿ ಅನೇಕ ಸ್ಥಳಗಳು ಟಾರ್ಗೆಟ್  ಆಗಿತ್ತು.  ಈ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕಿತ್ತು.  ಆದರೆ ಕಾಂಗ್ರೆಸ್ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ.

ಕಾಂಗ್ರೆಸ್ ನಾಯಕರು ಗೃಹ ಸಚಿವರಿಗೆ ಬಳೆ ಕಳುಸುವ ಕೆಲಸ ಮಾಡಿದ್ದಾರೆ.  ಇದೇ ರೀತಿ ಮಾಡಿದರೇ ಕಾಂಗ್ರೆಸ್ ಗೆ ಎಷ್ಟು ಬಳೆ ಕಳುಹಿಸಬೇಕಾಗಿತ್ತು. ಕಾಂಗ್ರೆಸ್ ಗೆ ‘ಅದಕ್ಕಾಗಿ ಬಳೆ ಫ್ಯಾಕ್ಟರಿಯನ್ನೇ ತೆರೆಯಬೇಕಾಗಿತ್ತು ಎಂದು ಬಿವೈ ವಿಜಯೇಂದ್ರ ಲೇವಡಿ ಮಾಡಿದರು.

Key words: Car, explosion, case, congress leaders, BY Vijayendra