Friday, August 14, 2026

BDA Apartments

Home Front Page ಸೊಕ್ಕು ಮುರಿಯಬೇಕು ಎಂದಿದ್ದ ಹೆಚ್.ಡಿಡಿಗೆ ಖಡಕ್ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ

ಸೊಕ್ಕು ಮುರಿಯಬೇಕು ಎಂದಿದ್ದ ಹೆಚ್.ಡಿಡಿಗೆ ಖಡಕ್ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ನವೆಂಬರ್,23,2024 (www.justkannada.in): ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಈ ಮಧ್ಯೆ   ಸಿಎಂ ಸಿದ್ದರಾಮಯ್ಯಗೆ ಅಹಂಕಾರ. ಸಿಎಂ ಸೊಕ್ಕು ಮುರಿಯಬೇಕು ಎಂದು ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ತಿರುಗೇಟು ನೀಡಿದ್ದಾರೆ.

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದೇವೆ. ಮೂರು ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿತ್ತು ಎಂದರು.

ಸಿದ್ದರಾಮಯ್ಯಗೆ ಅಂಹಕಾರ. ಸಿಎಂ ಸೊಕ್ಕು ಮುರಿಯಬೇಕು ಎಂದು ಹೆಚ್ ಡಿ ದೇವೇಗೌಡರು ಹೇಳಿದ್ದರು. ಅಧಿಕಾರದಿಂದ ಕಾಂಗ್ರೆಸ್ ತೆಗೆಯುವುದೇ ನನ್ನ ಉದ್ದೇಶ ಎಂದಿದ್ದರು. 40 ವರ್ಷದ ರಾಜಕೀಯದಲ್ಲಿ ನಾನು ದರ್ಪ ತೋರಿಲ್ಲ. ನಾನು ಅಧಿಕಾರದಲ್ಲಿ ಇದ್ದರೂ ಇಲ್ಲದಿದ್ದರೂ ಒಂದೇ ರೀತಿ ಇರುತ್ತೇನೆ. ಅಳೋದನ್ನ ದೊಡ್ಡಗೌಡರ ಫ್ಯಾಮಿಲಿ ಅಭ್ಯಾಸ ಮಾಡಿಕೊಂಡಿದ್ದಾರೆ. ಅಪ್ಪ, ಮಗ, ಮೊಮ್ಮಗ ಗೋಳೊ ಅಂತಾ ಅಳೋದು ಎಂದು ಲೇವಡಿ ಮಾಡಿದರು.

ಬಿಜೆಪಿಯವರು ನಮ್ಮ ಅಭಿವೃದ‍್ಧಿ ಕಾರ್ಯಗಳ ಬಗ್ಗೆ ಅಪಪ್ರಚಾರ ಮಾಡಿದರು. ಮುಡಾ ಮತ್ತು ವಾಲ್ಮೀಕಿ 2 ಪ್ರಕರಣಗಳಲ್ಲಿ ನನ್ನ ಪಾತ್ರವಿದೆ ಎಂದು ವಿಪಕ್ಷಗಳು ಆರೋಪಿಸಿದರು. ಮುಡಾ ಪ್ರಕರಣದಲ್ಲಿ ನನ್ನ ಪಾತ್ರವಿದೆ ಅಂದರು.  ವಕ್ಫ್ ವಿವಾದದಲ್ಲಿ ಕೋಮುವಾದ ಸೃಷ್ಠಿಸಿದರು. ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿದ್ದರು. ಆದರೆ ಜನತೆ ಆರೋಪ ತಿರಸ್ಕರಿಸಿ ಗೆಲುವು ನೀಡಿದ್ದಾರೆ. 3 ಕ್ಷೇತ್ರಗಳಲ್ಲೂ ನಿರೀಕ್ಷೆಯಂತೆ ಗೆದ್ದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.

Key words: By-election, CM Siddaramaiah, HD Devegowda, arrogance