Wednesday, August 12, 2026

BDA Apartments

Home Front Page ನಿಖಿಲ್ ಸೋಲಿಗೆ ಹೆಚ್ ಡಿಕೆ ಕಾರಣ- ಸಚಿವ ಚಲುವರಾಯಸ್ವಾಮಿ

ನಿಖಿಲ್ ಸೋಲಿಗೆ ಹೆಚ್ ಡಿಕೆ ಕಾರಣ- ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ನವೆಂಬರ್,23,2024 (www.justkannada.in): ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಪ್ಪನಿಂದಲೇ ಮಗನಿಗೆ ಸೋಲಾಗಿದೆ. ನಿಖಿಲ್ ಕುಮಾರಸ್ವಾಮಿ ಸೋಲಿಗೆ ಅವರ ತಂದೆ ಹೆಚ್.ಡಿ ಕುಮಾರಸ್ವಾಮಿಯೇ ಕಾರಣ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಚನ್ನಪಟ್ಟಣದಲ್ಲಿ 18ದಿನಕ್ಕೂ ಹೆಚ್ಚು ಪ್ರಚಾರ ಮಾಡಿದರು. ಕುಮಾರಸ್ವಾಮಿ ನಮ್ನನ್ನೆಲ್ಲ ಗಲೀಜು ಎಂದಿದ್ದರು. ನಮ್ಮನ್ನ‌ ಕಳೆದು ಕೊಂಡು ಮಗನನ್ನ ಮೂರು ಬಾರಿ ಸೋಲಿಸಿದರು. ಕುಮಾರ ಸ್ವಾಮಿಗೆ ನಾವು ಸಾಪ್ಟ್ ಆಗೋಕಾಗಲ್ಲ. ಕುಮಾರ ಸ್ವಾಮಿ ಆಡುವ ಮಾತು ನಡವಳಿಕೆಗೆ ಸೋಲಾಗಿದೆ. ನಿಖಿಲ್ ಸೋತಿದ್ದರೆ  ಅದು ಹೆಚ್ ಡಿ ಕುಮಾರಸ್ವಾಮಿ ಅವರಿಂದ ಎಂದರು.

ಇನ್ನಾದರೂ ಬೇರೆಯವರ ಬಗ್ಗೆ ಲಘುವಾಗಿ ಮಾತನಾಡದೇ ಕುಮಾರಸ್ವಾಮಿ ಸೌಜನ್ಯದಿಂದ ಮಾತನಾಡಬೇಕು. ಇದೀಗ ನಿಖಿಲ್ ಬಲಿಪಶು ಆಗಿದ್ದಾರೆ. ನಮಗಿಂತ ಹೆಚ್ಚು ಎಫೆಕ್ಟಿವ್ ಆಗಿ ಅವರು ಚುನಾವಣೆ ಮಾಡಿದರು. ನಮಗಿಂತ ಹೆಚ್ಚು ಹಣ ಅವರು ಖರ್ಚು ಮಾಡಿದರು. ದೇವೇಗೌಡರು ನಮ್ಮನ್ನ ವೈರಿ ರೀತಿ ನೋಡಿದರು. ದೇವೇಗೌಡರ ಬಾಯಲ್ಲಿ ಅಂತಹ ಮಾತು‌ಬರಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

Key words: HDK, responsible, Nikhil, defeat, Minister, Chaluvarayaswamy