ಯಡಿಯೂರಪ್ಪರನ್ನ ಹುಲಿಯಾ,ರಾಜಾಹುಲಿ ಅಂತೀವಿ. ಹಾಗಾದ್ರೆ ಅವರು ಕಾಡಿನಲ್ಲಿದ್ರಾ..?- ಸಿಎಂ ಇಬ್ರಾಹಿಂ ವ್ಯಂಗ್ಯ..

ಮೈಸೂರು,ಮೇ,26,2022(www.justkannada.in):  ಪಠ್ಯ ಪುಸ್ತಕದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ ಟೈಟಲ್ ತೆಗದಿರುವ ವಿಚಾರ ಕುರಿತು ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯ‍ಕ್ಷ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ,  70 ವರ್ಷದಿಂದ ಬರೆದುಕೊಂಡು ಬಂದಿದ್ದಾರೆ. ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಅವರನ್ನ ಹುಲಿಯ ಜೊತೆ ತೋರಿಸಿದ್ದಾರೆ. ಹಾಗಾದ್ರೆ ಹಿಂದಿನ ಕಾಲದಲ್ಲಿ ಫೋಟೊಗ್ರಫಿ ಇತ್ತಾ. ಹುಲಿನ ಹೊಡೆಯೊಕೆ ಹೋಗಿರುವುದನ್ನ ಯಾರಾದ್ರು ಫೋಟೊ ತೆಗೆದಿದ್ದಾರಾ. ಯಡಿಯೂರಪ್ಪನನ್ನ ಹುಲಿಯಾ ಅಂತೀವಿ, ರಾಜಾಹುಲಿ ಅಂತೀವಿ. ಹಾಗಾದ್ರೆ ಅವರು ಕಾಡಿನಲ್ಲಿದ್ರಾ. ಒಬ್ಬ ಸಂಸದರಾಗಿ ಏನು ಮಾತನಾಡಬೇಕೆಂಬ ಪ್ರಜ್ಞೆ ಇಲ್ಲ. ಮೈಸೂರು ಕುವೆಂಪು ನಾಡು. ಪುಟ್ಟಪ್ಪನವರ ಬಳಿ ನಾವೆಲ್ಲಾ ಪಾಠ ಕೇಳಿದ್ದೇವೆ. ಪುಟ್ಟಪ್ಪನವರ ಪುಸ್ತಕಗಳನ್ನ ತೆಗೆಯಲು ಹೊರಟಿದ್ದಾರೆ. ನಮ್ಮವ್ವ ಕರ್ನಾಟಕ ಮಾತೆ, ನಮ್ಮ ಅಜ್ಜಿ ಭಾರತ ಮಾತೆ. ಮೊದಲು ಅವ್ವನನ್ನ ನೋಡ್ಲಾ ಅಂದ್ರೆ ಅಜ್ಜಿ ನೋಡಕೆ ಹೊಂಟವ್ರೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ನಿಂದ ಮರಿತಿಬ್ಬೇಗೌಡ ಅಂತರ ಕಾಯ್ದುಕೊಂಡಿರುವ  ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ, ಮರಿತಿಬ್ಬೇಗೌಡರ ಜೊತೆ ನಾನು ಮಾತನಾಡುತ್ತೇನೆ. ಮನೆಯಲ್ಲಿದ್ದಾಗ ಜಗಳ ನಡೆಯುವುದು ಸಹಜ. ಮುಂದೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಜಿ.ಟಿ.ದೇವೇಗೌಡರ ಜೊತೆಯೂ ನಾನು ಮಾತನಾಡುತ್ತೇನೆ. ಮೈಸೂರಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲ. ನಾವು ಹುಟ್ಟಿಸಿದ ಮಕ್ಕಳನ್ನ ನಮ್ಮ ಮಕ್ಕಳು ಎನ್ನುತ್ತಾರೆ‌. ನೀವು ಗಂಡಸರಾ…? ನಮ್ಮಲ್ಲಿರುವ ಹುಡುಗರನ್ನ ಕರೆದುಕೊಂಡು ಕಾಂಗ್ರೆಸ್ ನವರು ಹೋದ್ರು. ಸ್ವಂತ ಶಕ್ತಿಯಿಂದ ಕೆಲಸ ಮಾಡಿ. ಯಡಿಯೂರಪ್ಪ ಮಗನಿಗೆ ಒಂದು ಸೀಟ್ ಕೊಡಿಸಲು ಆಗಲಿಲ್ಲ. ಯಡಿಯೂರಪ್ಪನವರಿಗೆ ಇದಕ್ಕಿಂತ ಅವಮಾನ ಇನ್ನೇನ್ ಬೇಕು ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಬಿಜೆಪಿಯನ್ನ ಕಟ್ಟಿದ್ದವರು. ನಾನು  ಸಂತೋಷ್ ಅವರನ್ನ ಅಭಿನಂದಿಸುತ್ತೇನೆ. ಅವರು ಆರ್ ಎಸ್ ಎಸ್ ನವರೇ ಇರಬಹುದು. ಹುಡುಕಿ ಹುಡುಕಿ ಕಾರ್ಯಕರ್ತರಿಗೆ ಅಧಿಕಾರ ನೀಡುತ್ತಿದ್ದಾರೆ. ದುಡ್ಡಿದವರಿಗೆ ಮಣೆ ಹಾಕುತ್ತಿಲ್ಲ.ಅವರದ್ದು ಕೇಶವ ಕೃಪಾ ನಮ್ಮದು ಬಸವ ಕೃಪ. ಅದೇ ನಮಗೂ ಅವರಿಗೆ ಇರುವ ವ್ಯತ್ಯಾಸ ಎಂದು ಸಿಎಂ ಇಬ್ರಾಹಿಂ ಹೇಳಿದರು.

Key words: BSY-Rajahuli -CM Ibrahim-mysore