ಉಗ್ರರ ವಿರುದ್ಧ ಗುಂಡಿನ ಚಕಮಕಿಯಲ್ಲಿ ರಾಜ್ಯದ ಯೋಧ ಹುತಾತ್ಮ.

ಬೀದರ್,ಜುಲೈ,7,2021(www.justkannada.in):  ಪಂಜಾಬ್ ಗಡಿಯಲ್ಲಿ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯ ವೇಳೆ  ರಾಜ್ಯದ ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ನಡೆದಿದೆ.jk

ಬೀದರ್ ಜಿಲ್ಲೆ ಔರಾದ್ ತಾಲೂಕಿನ ಆಲೂರು ಗ್ರಾಮದ ಬಸವರಾಜು(28) ಹುತಾತ್ಮರಾಗಿರುವ ಯೋಧ. ನಿನ್ನೆ ಸಂಜೆ ಗಡಿಯಲ್ಲಿ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯ ವೇಳೆ ಬಿಎಸ್ ಎಫ್ ಯೋಧ ಬಸವರಾಜು ಹುತಾತ್ಮರಾಗಿದ್ದಾರೆ.

ಬಸವರಾಜು ಅವರು ಕಳೆದ 8 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಾಳೆ ಯೋಧ ಬಸವರಾಜು ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸುವ ಸಾಧ್ಯತೆ ಇದ್ದು ನಾಳೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

Key words: BSF- Soldier-death-firing- terrorist-bidar