ಎಲ್ಲರೂ ಮತ ಹಾಕಿದ್ರೆ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ- ಡಿಕೆಶಿ ಪರ ಮಹಮ್ಮದ್ ಹ್ಯಾರಿಸ್ ನಲಪಾಡ್ ಬ್ಯಾಟಿಂಗ್

ಉಡುಪಿ,ಜುಲೈ,7,2021(www.justkannada.in):  ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಕುರಿತ ಹೇಳಿಕೆಗಳು ಮುಂದುವರೆದಿದ್ದು,ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗ್ತಾರೆ ಎಂದು ಕಾಂಗ್ರೆಸ್ ಮುಖಂಡ ಮಹಮ್ಮದ್ ಹ್ಯಾರಿಸ್ ನಲಪಾಡ್  ಹೇಳಿದ್ದಾರೆ.jk

ಉಡುಪಿಯಲ್ಲಿ  ಇಂದು ಮೀನುಗಾರರ ಮಹಿಳೆಯರ ಜೊತೆಗೆ ಮಾತನಾಡುತ್ತಾ ಸಿಎಂ ಅಭ್ಯರ್ಥಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಹಮ್ಮದ್ ಹ್ಯಾರಿಸ್ ನಲಪಾಡ್, ಮುಂದೆ ಎರಡು ವರ್ಷಗಳಲ್ಲಿ ಚುನಾವಣೆ ಬರುತ್ತದೆ. ಎಲ್ಲರೂ ಮತ ಹಾಕಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಕಾಂಗ್ರೆಸ್ ‌ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗ್ತಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಡಿಕೆಶಿ ಪರ  ಮಹಮ್ಮದ್ ನಲಪಾಡ್ ಬ್ಯಾಟ್ ಬೀಸಿದರು.

Key words: DK Sivakumar -will be –CM-Mohammad Harris Nalapad- batting