Tuesday, September 22, 2026

BDA Apartments

ಉಳಿದ ಅವಧಿಗೆ ಬಿಎಸ್ ವೈ ಅವರೇ ಸಿಎಂ- ಸಚಿವ ಶ್ರೀರಾಮುಲು… BDA JK_Adv BDA Adv
Home Front Page ಉಳಿದ ಅವಧಿಗೆ ಬಿಎಸ್ ವೈ ಅವರೇ ಸಿಎಂ- ಸಚಿವ ಶ್ರೀರಾಮುಲು…

ಉಳಿದ ಅವಧಿಗೆ ಬಿಎಸ್ ವೈ ಅವರೇ ಸಿಎಂ- ಸಚಿವ ಶ್ರೀರಾಮುಲು…

ಚಿತ್ರದುರ್ಗ,ಆ,3,2020(www.justkannada.in):  ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ಕುರಿತ ವಿಚಾರ ಚರ್ಚೆಯಲ್ಲಿದ್ದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಉಳಿದ ಅವಧಿಗೆ ಬಿಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳಿದರು.jk-logo-justkannada-logo

ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಇಂದು ಮಾಧ್ಯಮದವರ ಜತೆ ಮಾತನಾಡಿದ ಸಚಿವ ಶ್ರೀರಾಮುಲು,  ಕೊರೋನಾ ಸೋಂಕಿತ ಸಿಎಂ ಬಿಎಸ್ ಯಡಿಯೂರಪ್ಪ ಶೀಘ್ರವೇ ಗುಣಮುಖರಾಗಲಿ. ಸಿಎಂ ಚೇತರಿಕೆಗೆ ನಾಯಕನಹಟ್ಟಿ  ತಿಪ್ಪೆರುದ್ರಸ್ವಾಮಿಗೆ ಹರಕೆ  ಕಟ್ಟಿಕೊಳ್ಳುತ್ತೇನೆ ಎಂದರು.bs-yeddyurappa-cm-minister-sriramulu-chitradurga

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಉಳಿದ ಅವಧಿಗೆ ಬಿಎಸ್ ವೈ ಅವರೇ ಸಿಎಂ ಆಗಿರುತ್ತಾರೆ. ದುರುದ್ದೇಶದಿಂದ ಸಿಎಂ ಬದಲಾವಣೆ ಚರ್ಚೆ ಸೃಷ್ಠಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಘಟಕದಲ್ಲಿ ಯಾವುದೇ ರಹಸ್ಯ ಸಭೆ ನಡೆದಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.

Key words: BS Yeddyurappa-CM-Minister- Sriramulu -chitradurga