ಎಸ್ ಎಸ್ ಎಲ್ ಸಿ ಪರೀಕ್ಷೆ ಬಳಿಕ ಕೊರೋನಾ ವೇಗಕ್ಕೆ ಬ್ರೇಕ್ – ಮತ್ತೆ ಲಾಕ್ ಡೌನ್ ಸುಳಿವು ನೀಡಿದ್ರಾ ಸಚಿವ ಆರ್.ಅಶೋಕ್..?

ಬೆಂಗಳೂರು,ಜೂ,30,2020(www.justkannada.in): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ವೇಗವಾಗಿ ಹರುಡುತ್ತಿದೆ. ಹೀಗಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ಬಳಿಕ ಕೊರೋನಾ ವೇಗಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದು ಇದರಿಂದ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಾ ಎಂಬ ಕುತೂಹಲ ಉಂಟಾಗಿದೆ.

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್,  ದಿನೇ ದಿನೇ ಕೊರೋನಾ ವೇಗ ಹೆಚ್ಚಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಬೇಕು. ಇದೊಂದು ಸಮರ ನಾಳೆಯೇ ಮುಗಿಯುತ್ತೆ ಎಂಬುದು ಇಲ್ಲ.ಕೊರೋನಾ ಇರುವವರೆಗೂ ಹೋರಾಟ ಮಾಡಬೇಕು ಎಂದರು. break-corona-speed-sslc-exam-minister-r-ashok

ಇನ್ನು ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆಗೆ ಯಾವುದೇ ತೊಂದರೆಯಾಗಬಾರದು. ಹೀಗಾಗಿ  ಪರೀಕ್ಷೆ ಬಳಿಕ ಕೊರೋನಾ ವಿರುದ್ದ ಹೋರಾಟ ಮಾಡುತ್ತೇವೆ. ಪರೀಕ್ಷೆ ನಂತರ ಕರೋನಾ ವೇಗಕ್ಕೆ ಬ್ರೇಕ್ ಹಾಕುತ್ತೇವೆ. ಇನ್ನು ಲಾಕ್ ಡೌನ್ ಬಗ್ಗೆ ನಿರ್ಧರಿಸುವ ಅಧೀಕಾರ ಸಿಎಂ ಬಿಎಸ್ ವೈಗೆ ಇದೆ ಎಂದು ಆರ್.ಅಶೋಕ್ ತಿಳಿಸಿದರು.

Key words: Break-Corona -Speed – SSLC Exam-minister-R. Ashok