Saturday, August 8, 2026

BDA Apartments

Home Crime ಟೈಯರ್ ಸ್ಟೋಟಗೊಂಡು ಟಮೋಟೊ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ…

ಟೈಯರ್ ಸ್ಟೋಟಗೊಂಡು ಟಮೋಟೊ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ…

ಕೋಲಾರ,ಆ,2019(www.justkannada.in): ಟೈರ್ ಸ್ಪೋಟಗೊಂಡು ಟಮೋಟೊ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿರುವ ಘಟನೆ ಕೋಲಾರ ಜಿಲ್ಲೆ ನರಸಾಪುರದಲ್ಲಿ ನಡೆದಿದೆ.

ನರಸಾಪುರದ ಬೆಳ್ಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಘಟನೆ ನಡೆದಿದೆ. ಚಳ್ಳೆಕೆರೆಯಿಂದ ಕೋಲಾರ ಮಾರುಕಟ್ಟೆಗೆ ಟಮೋಟೊ ಸಾಗಿಸುತ್ತಿದ್ದ ಕ್ಯಾಂಟರ್ ನ ಟೈರ್ ಸ್ಪೋಟಗೊಂಡು ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕ್ಯಾಂಟರ್ ನಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ಘಟನೆಯಿಂದ ಕ್ಯಾಂಟರ್ ನಲ್ಲಿದ್ದ ಟಮೋಟೋ ಮತ್ತು ಕ್ಯಾಂಟರ್ ರಸ್ತೆಯಲ್ಲಿ ಬಿದ್ದು ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ವಾಹನಗಳು ಚಲಿಸಲು ಮಾರ್ಗ ಬದಲಿಸಿ ಪ್ರಯಾಣಕ್ಕೆ ದಾರಿ ಮಾಡಿಕೊಟ್ಟರು. ಈ ಕುರಿತು ವೇಮಗಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Cantor –overturn-carrying – tomato -kolar