Friday, September 25, 2026

BDA Apartments

Home Front Page ಬೆವರು ಸುರಿಸಿ ಉದ್ಯೋಗ ಮಾಡದ ವರ್ಗವೇ “ಗ್ಯಾರಂಟಿ ” ನಿಂದಕರು..!

ಬೆವರು ಸುರಿಸಿ ಉದ್ಯೋಗ ಮಾಡದ ವರ್ಗವೇ “ಗ್ಯಾರಂಟಿ ” ನಿಂದಕರು..!

Senior journalist and Mysuru District Journalists Association President K. Deepak opined that only those who do not know the plight of poverty and hunger are criticizing the guaranteed schemes of Karnataka Chief Minister Siddaramaiah

ಬೆವರು ಸುರಿಸಿ ಉದ್ಯೋಗ ಮಾಡದ ವರ್ಗವೇ “ಗ್ಯಾರಂಟಿ ” ನಿಂದಕರು..! nypunya1

ಮೈಸೂರು, ಜ.೨೯,೨೦೨೫: (www.justkannada.in news) ಬಡತನ, ಹಸಿವಿನ ಸಂಕಟ ಗೊತ್ತಿಲ್ಲದವರಷ್ಟೆ  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಯುವ ಪತ್ರಕರ್ತ ಸಿಂಧುವಳ್ಳಿ ಸುಧೀರ ಅವರು ರಚಿಸಿರುವ “ ಭಾಗ್ಯವಿಧಾತʼ ಪುಸ್ತಕವನ್ನು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಇಂದು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯ್‌ ಕುಮಾರ್‌ ಹಾಜರಿದ್ದರು.

ಬೆವರು ಸುರಿಸಿ ಉದ್ಯೋಗ ಮಾಡದ ವರ್ಗವೇ “ಗ್ಯಾರಂಟಿ ” ನಿಂದಕರು..! book

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಕೆ.ದೀಪಕ್‌ ಮಾತನಾಡುತ್ತಾ “ ಭಾಗ್ಯವಿಧಾತʼ ಪುಸ್ತಕವನ್ನು ವಿಶ್ಲೇಷಿಸಿದ್ದು ಹೀಗೆ…

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ “ಅನ್ನಭಾಗ್ಯ” ಯೋಜನೆ ಘೋಷಿಸಿದರು. ಇದು ಹಸಿವಿನಿಂದ ಬಳಲುತ್ತಿದ್ದ ಅದೆಷ್ಟೋ ಬಡವರಿಗೆ ಅನುಕೂಲವಾಯಿತು. ಆದರೆ  ಹಸಿವಿನ ಪದದ ಅರ್ಥವೇ ತಿಳಿಯದವರು, ಶತಶತಮಾನಗಳಿಂದ ಮೃಷ್ಠಾನ ಭೋಜನ ಉಂಡವರು ಇದನ್ನು ಟೀಕಿಸಿದರು.

ಅದೇ ರೀತಿ ಬೆಳ್ಳಿ ಪಲ್ಲಕಿಗಳಲ್ಲಿ ಮೆರೆದವರು, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ “ ಶಕ್ತಿ ಯೋಜನೆ” ಕುರಿತು ವ್ಯಂಗ್ಯವಾಡಿದರು.

ಕಲ್ಲಿನ ದೇವರಿಗೆ ಹಾಲು ನೈವೇದ್ಯ ನೀಡುವ ಮಂದಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ “ ಕ್ಷೀರಭಾಗ್ಯ “ ಯೋಜನೆಯಲ್ಲು ಕಲ್ಲು ಹುಡುಕಿದರು.

ಕೇವಲ ಐದಾರು ಸಾವಿರ ರೂ.ಗಳಿಗೆ ತಲೆಮಾರುಗಳನ್ನೇ ಜೀತಕ್ಕಿಟ್ಟುಕೊಂಡ ಮಂದಿ, ಸರಕಾರ ಮಹಿಳೆಯರ ಸ್ವಾವಲಂಭನೆಗೆಂದು ನೀಡುತ್ತಿರುವ ಎರಡು ಸಾವಿರ ರೂ.ಗಳ  “ಗೃಹಲಕ್ಷ್ಮೀ” ಯೋಜನೆ ಬಗ್ಗೆ ವ್ಯಂಗ್ಯವಾಡಿದರು.

ಮೈ ಮುರಿದು, ಬೆವರು ಸುರಿಸಿ ಉದ್ಯೋಗವನ್ನೇ ಮಾಡದ, ನಿರೂದ್ಯೋಗದ ಅರಿವೇ ಇರದೆ ಐಷಾರಾಮಿ ಜೀವನ ನಡೆಸುತ್ತಿರುವವರು, ಸರಕಾರ ವಿದ್ಯಾವಂತ ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಜಾರಿಗೊಳಿಸಿದ “ಯುವಶಕ್ತಿ” ಯೋಜನೆ ಬಗ್ಗೆ ವ್ಯಂಗ್ಯವಾಡುತ್ತಾರೆ ಎಂದು ಟೀಕಿಸಿದರು.

ಹಣವನ TOP-BANNER-01 TOP BANNER 01

ರಾಜಕೀಯ ಚರಿತ್ರೆಯಲ್ಲಿ ದಾಖಲು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸಿರುವ ಈ ಗ್ಯಾರಂಟಿ ಯೋಜನೆಗಳು ರಾಜಕೀಯ ಚರಿತ್ರೆಯಲ್ಲಿ ದಾಖಲೆ ಸೃಷ್ಠಿಸಲಿ ಬಿಡಿ ಎಂದು ಕೆ.ದೀಪಕ್‌ ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಟಿತವಾಗಿದೆ. ಜನ ಸೋಮಾರಿಗಳಾಗುತ್ತಿದ್ದಾರೆ ಎಂದು ಟೀಕಾಕಾರರು ಅಲವತ್ತುಕೊಳ್ಳುತ್ತಿದ್ದಾರೆ, ಅಭಿವೃದ್ಧಿ ಯೋಜನೆಗಳು ಹೇಗೆ ಜಾರಿಗೆ ಬರುತ್ತದೆ ಎಂಬುದು ತಿಳಿಯದ ವಿಷಯವೇನಲ್ಲ. ಕೋಟ್ಯಾಂತರ ರೂ. ವೆಚ್ಚ ಮಾಡಿ ಅದರಲ್ಲಿ ಲಕ್ಷಗಟ್ಟಲೇ  ಕಮಿಷನ್‌ ಗಳನ್ನು ಅಧಿಕಾರಿಗಳು, ರಾಜಕಾರಣಿಗಳು ಸಂಪಾದಿಸುವುದಿಲ್ಲವೇ. ಹಾಗೆಯೆ, ಒಂದೈದು ವರ್ಷ ಅಭಿವೃದ್ಧಿ ಸ್ಥಗಿತಗೊಳಿಸಿ ಆ ಹಣವನ್ನು ರಾಜ್ಯದ ಬಡವರಿಗೆ ಕೊಡಲಿ ಬಿಡಿ ಎಂದರು.

ಸಮಾಜದ ಒಂದು ವರ್ಗದ ಜನರಲ್ಲಿ ಬಡತನ ನಿರ್ಮೂಲನೆಗಿಂತ ಬಡವರನ್ನೇ ನಿರ್ಮೂಲನೆ ಮಾಡುವ ಉದ್ದೇಶವಿದಂತಿದೆ. ಅದಕ್ಕಾಗಿಯೇ ಬಡವರಿಗೆ ಆರ್ಥಿಕವಾಗಿ ನೆರವಾಗುವ ಯಾವುದೇ ಯೋಜನೆಗಳನ್ನು ಅವರು ಸಹಿಸುವುದಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜವಾದದ ಸಿದ್ಧಾಂತದ ಹಿನ್ನೆಲೆಯಲ್ಲಿ ಬಂದಿರುವ, ಬೆಳೆದಿರುವ ನಾಯಕ. ಆದ್ದರಿಂದ ಅವರನ್ನು ಈ ವಿಷಯದಲ್ಲಿ ನಿಯಂತ್ರಿಸಲು ಯಾರಿಂದಲೂ ಆಗದು ಎಂದು ಅಭಿಪ್ರಾಯಪಟ್ಟರು.

alibaba chief VTU TOP BANNER 04

ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ :

guaranteed abusers feliciation

ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ನಡೆದ ಸಮಾರಂಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ದಯಾಶಂಕರ ಮೈಲಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾದ ಸಂಘದ ಸದಸ್ಯ ಗುರುಪ್ರಸಾದ್ ತುಂಬಸೋಗೆ (ಪ್ರತಿನಿಧಿ), ಶಿಲ್ಪಾ ಪಿ. ( ಡೆಕ್ಕನ್ ಹೆರಾಲ್ಡ್‌ ), ಕೆ.ಪಿ. ನಾಗರಾಜ್ ( ಪಬ್ಲಿಕ್ ಟಿವಿ),  ನಜೀರ್ ಅಹಮದ್ ( ರೈತ ನಾಡು ), ಶಿವಕುಮಾರ ವಿ ರಾವ್ ಹುಣಸೂರು ( ವಿಜಯವಾಣಿ), ಸಿ.ಜೆ. ಪುನೀತ್ ( ವಿಜಯವಾಣಿ) ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಭಾಪತಿ  ಯು.ಟಿ. ಖಾದರ್ ಅಭಿನಂದಿಸಿದರು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಉಪಾಧ್ಯಕ್ಷ ರವಿ ಪಾಂಡವಪುರ ಹಾಜರಿದ್ದರು.

key words:  The “guaranteed”, abusers, MYSORE journalist association, deepak.k, cm, Siddaramaiah, book, Bhagyavidatha

SUMMARY: 

೨೦೨೫ www justkannada deepak

The “guaranteed” abusers are the class that sweats it out and does not work.

Senior journalist and Mysuru District Journalists Association President K. Deepak opined that only those who do not know the plight of poverty and hunger are criticising the guarantee schemes of Karnataka Chief Minister Siddaramaiah