Tuesday, August 4, 2026

BDA Apartments

Home Crime ಪ್ರಯಾಗ್ ರಾಜ್ ಸಮೀಪದಲ್ಲೇ ಮೈಸೂರಿನ ಇಬ್ಬರು ಯುವಕರ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ

ಪ್ರಯಾಗ್ ರಾಜ್ ಸಮೀಪದಲ್ಲೇ ಮೈಸೂರಿನ ಇಬ್ಬರು ಯುವಕರ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ

ಮೈಸೂರು,ಜನವರಿ,30,2025 (www.justkannada.in): ಪ್ರಯಾಗ್ ರಾಜ್ ಮಹಾ ಕುಂಭಮೇಳ ಮುಗಿಸಿ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೈಸೂರಿನ ಇಬ್ಬರು ಯುವಕರ ಅಂತ್ಯಕ್ರಿಯೆ ಪ್ರಯಾಗ್ ರಾಜ್ ಸಮೀಪದಲ್ಲಿ ನೆರವೇರಿದೆ.

ಅಪಘಾತದಲ್ಲಿ ಮೃತಪಟ್ಟ ಮೈಸೂರಿನ ರಾಮಕೃಷ್ಣ ಶರ್ಮ(31) ಮತ್ತು ಅರುಣ್ ಶಾಸ್ತ್ರಿ(38) ಅವರ ಅಂತ್ಯಕ್ರಿಯೆಯನ್ನು ಮಿರ್ಜಾಪುರದ ಘಾಟ್ ಸಮೀಪ ಕುಟುಂಬಸ್ಥರು ನೆರವೇರಿಸಿದ್ದಾರೆ.  ಮೃತದೇಹ ಮೈಸೂರಿಗೆ ತರಲು ಅಸಾಧ್ಯವಾದ ಹಿನ್ನೆಲೆ ಅಲ್ಲೆ ಅಂತ್ಯಕ್ರಿಯೆ ಮಾಡಿದ್ದಾರೆ.

ಕುಟುಂಬಸ್ಥರು ಮೈಸೂರಿನಿಂದ ವಾರಣಾಸಿಗೆ ವಿಮಾನದಲ್ಲಿ ತೆರಳಿ ನಂತರ ವಾರಣಾಸಿಯಿಂದ ಮಿರ್ಜಾಪುರಕ್ಕೆ ತೆರಳಿ ಅಂತ್ಯಕ್ರಿಯೆ ನೆರವೇರಿಸಿದರು. ಇಂದು ಕಾಶಿಯಲ್ಲಿ ಅಸ್ತಿ ವಿಸರ್ಜಿಸಿ ವಾಪಸ್ ಬರಲು ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ.

ಪ್ರಯಾಗರಾಜ್  ಮಹಾಕುಂಭಮೇಳ ಮುಗಿಸಿಕೊಂಡು ಕಾಶಿಗೆ ಬರುವಾಗ  ಮಿರ್ಜಾಪುರದ ಬಳಿ  ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ರಾಮಕೃಷ್ಣ ಶರ್ಮ , ಅರುಣ್ ಶಾಸ್ತ್ರಿ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಇಬ್ಬರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಕೊನೆಯುಸಿರೆಳೆದಿದ್ದರು

ರಾಮಕೃಷ್ಣ ಶರ್ಮ  ಕೆ ಆರ್ ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು. ಅರುಣ್ ಶಾಸ್ತ್ರಿ(38) ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು.

Key words: Family, funeral, Mysore,  youths, near, Prayagraj