ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಪರಿಶೀಲನೆ

ಕೊಡಗು/ಧಾರವಾಡ,ಫೆಬ್ರವರಿ,16,2026 (www.justkannada.in):  ಇತ್ತೀಚೆಗೆ ಬಾಂಬ್ ಬೆದರಿಕೆಗಳು ಹೆಚ್ಚುತ್ತಿದ್ದು ಈ ನಡುವೆ ಇಂದು ನ್ಯಾಯಾಲಯಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪ ಸ್ಥಗಿತಗೊಳಿಸಲಾಗಿದ್ದು ಬಾಂಬ್ ನಿಷ್ಕ್ರಿಯಾ ದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಹಾಗೆಯೇ ದಾವಣಗೆರೆ ಜಿಲ್ಲಾ ಕೋರ್ಟ್ ಗೂ ಸಹ ಬಾಂಬ್ ಬೆದರಿಕೆ ಹಾಕಲಾಗಿದ್ದು ಮಧ್ಯಾಹ್ನ 12.30ಕ್ಕೆ ಆರ್ ಡಿಎಕ್ಸ್  ಬಾಂಬ್ ಸ್ಪೋಟಿಸುವುದಾಗಿ ನ್ಯಾಯಾಧೀಶರಿಗೆ ಅಪರಿಚಿತ ವ್ಯಕ್ತಿ ಇಮೇಲ್ ನಲ್ಲಿ ಸಂದೇಶ ರವಾನಿಸಿದ್ದಾನೆ. ಪೊಲೀಸರು ಬಾಂಬ್ ಪತ್ತೆದಳದಿಂದ  ಪರಿಶೀಲನೆ ನಡೆಯುತ್ತಿದೆ.

ಹಾಗೆಯೇ ಧಾರವಾಡ  ಹೈಕೋರ್ಟ್ ನ್ಯಾಯಪೀಠಕ್ಕೂ ಬಾಂಬ್ ಬೆದರಿಕೆ ಬಂದಿದೆ.  ಇಮೇಲ್ ಮೂಲಕ ಬಾಂಬ್ ಬೆದರಿಕೆ  ಬಂದಿದ್ದು ವಕೀಲರು ಸಿಬ್ಬಂದಿಗಳು ಹೈಕೋರ್ಟ್ ಪೀಠದಿಂದ ಹೊರಬಂದಿದ್ದು ಪರಿಶೀಲನೆ ನಡೆಯುತ್ತಿದೆ.  ಒಂದು ತಿಂಗಳ ಹಿಂದೆಯೂ ಇದೇ ರೀತಿ ಹೈಕೋರ್ಟ್ ಪೀಠಕ್ಕೆ ಬಾಂಬ್ ಬದರಿಕೆ ಸಂದೇಶ ಬಂದಿತ್ತು. ಇದೀಗ ವಿಷಯ ತಿಳಿದು ಗರಗ್ ಠಾಣಾ ಪೊಲೀಸರು ದೌಡಾಯಿಸಿದ್ದಾರೆ.

Key words: Bomb threat, Madikeri, Davanagere, courts