Sunday, September 20, 2026

BDA Apartments

ಮಂಗಳೂರಿನ ಬಾಂಬ್ ಪತ್ತೆ ಅಣುಕು ಪ್ರದರ್ಶನದಂತಿತ್ತು –ಮಾಜಿ ಸಿಎಂ ಹೆಚ್.ಡಿ ಕು...
Home Front Page ಮಂಗಳೂರಿನ ಬಾಂಬ್ ಪತ್ತೆ ಅಣುಕು ಪ್ರದರ್ಶನದಂತಿತ್ತು –ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ…

ಮಂಗಳೂರಿನ ಬಾಂಬ್ ಪತ್ತೆ ಅಣುಕು ಪ್ರದರ್ಶನದಂತಿತ್ತು –ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ…

ಶಿವಮೊಗ್ಗ,ಜ,21,2020(www.justkannada.in):  ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ದವೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಮಂಗಳೂರಿನ ಬಾಂಬ್ ಪತ್ತೆ ಅಣುಕು ಪ್ರದರ್ಶನದಂತಿತ್ತು. ಇದು ಅಣುಕು ಪ್ರದರ್ಶನವನ್ನ ನೋಡಿದ ಹಾಗೆ ಆಗಿದೆ. ಜನರನ್ನ ಭಯಭೀತರನ್ನಾಗಿ ಮಾಡಬೇಡಿ.  ಕರಾವಳಿ ಪ್ರದೇಶದ ಆರ್ಥಿಕ ಪ್ರಗತಿ ಕುಂಠಿತಗೊಳಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ  ಕುಮಾರಸ್ವಾಮಿ, ಇಂದು ಮಂಗಳೂರು ಕಮೀಷನರ್ ಡಾ.ಪಿ.ಹರ್ಷ ಅವರು ಎಲ್ಲಿಯಾದ್ರೂ ಬಾಂಬ್ ಹಾಕಿಸಿದ್ರಾ ಎಂದು ವ್ಯಂಗ್ಯವಾಡಿದರು. ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ.  ನನ್ನ 14 ತಿಂಗಳ ಅಧಿಕಾರವಧಿಯಲ್ಲಿ ಇಂತಹ ಬೆಳವಣಿಗೆ ಆಗಿರಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಗಳೂರು ಶಾಂತವಾಗಿತ್ತು. ಆದರೆ ಈಗ ಮಂಗಳೂರಿನಲ್ಲೇ ಯಾಕೆ ಇಂತಹ ಪ್ರಕರಣಗಳು ನಡೆಯುತ್ತಿವೆ. ಸರ್ಕಾರ ಮತ್ತು ಅಧಿಕಾರಿಗಳು ಜನರ ಬದುಕಿನಲ್ಲಿ ಆಟವಾಡಬಾರದು ಎಂದು ಸಲಹೆ ನೀಡಿದರು.

Key words: Bomb- detected -Mangalore airport-Former CM -HD Kumaraswamy- criticized.