ವಿಭಿನ್ನ ಪ್ಯಾಂಟ್ ಧರಿಸಿ ಗಮನ ಸೆಳೆದ ದೀಪಿಕಾ: ಬೆಲೆ ಕೇಳಿ ಶಾಕ್ ಆದ ಅಭಿಮಾನಿಗಳು

ಮುಂಬೈ:ಜೂ-25:(www.justkannada.in) ವಿಭಿನ್ನ ಉಡುಗೆಯಿಂದಲೇ ಗಮನಸೆಳೆಯುತ್ತಿರುವ ಬಾಲಿವುಡ್ ಮೋಸ್ಟ್ ಸ್ಟೈಲಿಶ್ ನಟಿ ದೀಪಿಕಾ ಪಡುಕೋಣೆ, ಮತ್ತೊಂದು ವಿಭಿನ್ನ ಹಾಗೂ ದುಬಾರಿ ಪ್ಯಾಂಟ್ ಧರಿಸಿ ಭಾರೀ ಸುದ್ದಿಯಾಗಿದ್ದಾರೆ.

ಫ್ಯಾಷನ್ ಮೋಹದ ಜತೆಗೆ ಡ್ರೆಸ್ ಬಗ್ಗೆ ತುಂಬಾ ಮುತುವರ್ಜಿ ವಹಿಸುವ ದೀಪಿಕಾ ಇತ್ತೀಚೆಗೆ ಸಿಲ್ವರ್​ ಬಣ್ಣದ ಪ್ಯಾಂಟ್​ ಮತ್ತು ಬಿಳಿ ಬಣ್ಣದ ಶರ್ಟ್​ ಹಾಗೂ ಮ್ಯಾಚಿಂಗ್​ ರಿಂಗ್ಸ್​ ಮತ್ತು ಹೈಹೀಲ್ಡ್​ ಚಪ್ಪಲಿಯನ್ನು ಹಾಕಿಕೊಂಡು ಕ್ಯಾಮರಾಗೆ ಪೋಸ್​ ನೀಡಿರುವ ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಂ ನಲ್ಲಿ ಅಪ್​ಲೋಡ್​ ಮಾಡಿದ್ದರು. ಈ ಫೋಟೋದಲ್ಲಿ ದಿಪಿಕಾ ಧರಿಸಿದ್ದ ಪ್ಯಾಂಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಅಂತೆಯೇ ಈ ಫೊತೋ ಕೂಡ ಇದೀಗ ಭಾರೀ ವೈರಲ್​ ಆಗಿದೆ.

ದೀಪಿಕಾ ಧರಿಸಿರುವ ಈ ಸಿಲ್ವರ್ ಕಲರ್ ಪ್ಯಾಂಟಿನ ಬೆಲೆ ಬರೋಬ್ಬರಿ 816 ಯೂರೋಗಳಷ್ಟು. ಭಾರತ ಕರೆನ್ಸಿ ಪ್ರಕಾರ ಈ ಪ್ಯಾಂಟಿಗೆ ಬರೋಬ್ಬರಿ 64,400 ರೂಪಾಯಿ. ದೀಪಿಕಾಳ ಪ್ಯಾಂಟ್ ಬೆಲೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ವಿಭಿನ್ನ ಪ್ಯಾಂಟ್ ಧರಿಸಿ ಗಮನ ಸೆಳೆದ ದೀಪಿಕಾ: ಬೆಲೆ ಕೇಳಿ ಶಾಕ್ ಆದ ಅಭಿಮಾನಿಗಳು
Bollywood,Deepika padukone,silver pant,Rs 60,000