ವಿಶ್ವಕಪ್ ಕ್ರಿಕೆಟ್: ಇಂದು ಆಸಿಸ್-ಇಂಗ್ಲಿಷರ ಕದನ !

ಲಂಡನ್‌, ಜೂನ್ 25, 2019 (www.justkannada.in): ಪ್ರಬಲ ತಂಡಗಳಾದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಇಂದು ಲಾರ್ಡ್ಸ್‌ನಲ್ಲಿ ಮುಖಾಮುಖಿಯಾಗಲಿವೆ.

ಈ ವಿಶ್ವಕಪ್‌’ನ ಪಂದ್ಯ ಕುತೂಹಲ ಕೆರಳಿಸಿದೆ. ಶ್ರೀಲಂಕಾ ವಿರುದ್ಧ ಅನಿರೀಕ್ಷಿತ ಸೋಲಿನಿಂದ ಆಘಾತ ಅನುಭವಿಸಿರುವ ಆತಿಥೇಯರು ಈ ಪಂದ್ಯದ ಮೂಲಕ ಗೆಲುವಿನ ಹಳಿಗೆ ಮರಳಲು ಕಾತರರಾಗಿದ್ದಾರೆ.

ಮೊದಲ ಬಾರಿ ವಿಶ್ವಕಪ್‌ ಗೆಲ್ಲಲು ಯತ್ನಿಸುತ್ತಿರುವ ಆತಿಥೇಯರು, ಗುಂಪಿನ ಹಂತದಲ್ಲಿ ಇನ್ನಷ್ಟು ಹಿನ್ನಡೆ ಕಾಣದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡ ಗೆಲುವಿನ ಅಭಿಯಾನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.