‘ಕಬ್ಜ’ಗೆ ಸ್ಟೆಪ್ ಹಾಕಲು ಬರುತ್ತಾರಾ ಬಾಲಿವುಡ್ ‘ಬೆಡಗಿ’!?

ಬೆಂಗಳೂರು, ಮೇ 24, 2022 (www.justkannada.in): ‘ಕಬ್ಜ’ ಸಿನಿಮಾದಲ್ಲಿ ಬಾಲಿವುಡ್ ಹೀರೋಯಿನ್​ ಕಾಣಿಸಿಕೊಳ್ಳಲಿದ್ದಾರಾ? ಎಂಬ ಪ್ರಶ್ನೆಗೆ ಚಿತ್ರದ ನಿರ್ದೇಶಕ ಆರ್ ಚಂದ್ರು ಉತ್ತರ ನೀಡಿದ್ದಾರೆ.

ಕಬ್ಜ ಈಗಾಗಲೇ ಸಖತ್ ಸದ್ದು ಮಾಡುತ್ತಿದೆ. ಇದೀಗ ಚಿತ್ರದ ಬಗ್ಗೆ ನಿರ್ದೇಶಕ ಆರ್.ಚಂದ್ರು ಮತ್ತೊಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಈಗಾಗಲೇ ಶ್ರಿಯಾ ಶರಣ್ ಅವರನ್ನು ಚಿತ್ರತಂಡ ಪರಿಚಯಿಸಿತ್ತು. ಆದರೆ ಮತ್ತೋರ್ವ ನಾಯಕಿಯ ಸುಳಿವು ನೀಡಿರಲಿಲ್ಲ. ಇದೀಗ ಆರ್.ಚಂದ್ರು ಆ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಕಬ್ಜ ಚಿತ್ರದಲ್ಲಿ ಮತ್ತೋರ್ವ ನಾಯಕಿ ಹಾಗೂ ಅವರ ಹಾಡಿನ ಭಾಗದ ಚಿತ್ರೀಕರಣ ಬಾಕಿ ಇದೆ. ಸುಮಾರು ಒಂದು-ಒಂದೂವರೆ ತಿಂಗಳು ಸೆಟ್ ಹಾಕಿ ಅದರ ಚಿತ್ರೀಕರಣ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಾಡು ಹಿಂದಿಗೆ ಸಲ್ಲುವಂತೆ ಇರಲಿದೆ ಎಂದು ಮಾಹಿತಿ ನೀಡಿರುವ ನಿರ್ದೇಶಕರು ನಾಯಕಿ ಕೂಡ ಅದೇ ಚಿತ್ರರಂಗದವರು ಇರುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ.