ರಾಕಿ ಭಾಯ್’ಗೆ ಆ್ಯಕ್ಸನ್ ಕಟ್ ಹೇಳಲು ಸಜ್ಜಾದ ನಿರ್ದೇಶಕ ನರ್ತನ್ !

ಬೆಂಗಳೂರು, ಮೇ 24, 2022 (www.justkannada.in): ನಟ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇದಕ್ಕೆ ಈಗ ಮತ್ತಷ್ಟು ಸ್ಪಷ್ಟತೆ ಸಿಕ್ಕಿದೆ. ಯಶ್ ಗಾಗಿ ನಿರ್ದೇಶಕ  ನರ್ತನ್ ಕಳೆದೆರಡು ವರ್ಷಗಳಿಂದ ಸ್ಕ್ರಿಪ್ಟ್ ಮಾಡುತ್ತಿದ್ದಾರೆ.

ಯಶ್‌ಗೆ ಸಿನಿಮಾದ ಕತೆ ಇಷ್ಟ ಆಗಿದ್ದು, ನರ್ತನ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ನರ್ತನ್ ಕೂಡ ತನ್ನ ತಂಡಕ್ಕೆ ಮುಂದಿನ ತಿಂಗಳು ರೆಡಿಯಿರುವಂತೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇನ್ನೊಂದು ಕಡೆ ನಿರ್ದೇಶಕ ನರ್ತನ್, ಯಶ್ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಎಲ್ಲಾ ಊಹಾ-ಪೋಹಗಳಿಗೆ ತೆರೆಬಿದ್ದಿದ್ದು, ಜೂನ್ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.