Tuesday, September 22, 2026

BDA Apartments

ಬಿಜೆಪಿಗೆ ಮತ್ತೆ ಅಧಿಕಾರಕ್ಕೇರುವ ಭ್ರಮೆ: ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗ...
Home Front Page ಬಿಜೆಪಿಗೆ ಮತ್ತೆ ಅಧಿಕಾರಕ್ಕೇರುವ ಭ್ರಮೆ: ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಲಿದೆ- ಸಿದ್ಧರಾಮಯ್ಯ ವಿಶ್ವಾಸ.

ಬಿಜೆಪಿಗೆ ಮತ್ತೆ ಅಧಿಕಾರಕ್ಕೇರುವ ಭ್ರಮೆ: ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಲಿದೆ- ಸಿದ್ಧರಾಮಯ್ಯ ವಿಶ್ವಾಸ.

ಹುಬ್ಬಳ್ಳಿ,ಮಾರ್ಚ್,20,2022(www.justkannada.in):  ಬಿಜೆಪಿಗೆ ಮತ್ತೆ ಅಧಿಕಾರಕ್ಕೇರುವ ಭ್ರಮೆ ಇದೆ. ಆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂಧು ವಿಪಕ್ಷ ನಾಯಕ ಸಿದ್ಧರಾಮಯ್ಯ ನುಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆಯಾ ಅಪರೇಷನ್ ಕಮಲ ಮೂಲಕ ಅಧಿಕಾರ ಹಿಡಿದರು. ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಲಿದೆ. ಸಿಎಂ ಆಕಾಂಕ್ಷಿಗಳ ಮಧ್ಯೆ ಕಿತ್ತಾಟ ಸಹಜ ಯಾರು ಸಿಎಂ ಅಂತಾ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ. ನಮ್ಮಲ್ಲಿ ಇರೋದು ಸೋನಿಯಾಗಾಂಧಿ ಬಣ ಮಾತ್ರ. ಬಿಜೆಪಿಯಲ್ಲಿ ಕಾಂಗ್ರೆಸ್ ನಿಂದ ಹೋದವರ ಬಣ. ಜೆಡಿಯು, ಆರ್ ಎಸ್ ಎಸ್ ನಿಂದ ಹೋದವರ ಬಣ ಇದೆ ಎಂದು ಟಾಂಗ್ ನೀಡಿದರು.

ಇನ್ನು ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಭಗವದ್ಗೀತೆಗೆ ನಮ್ಮ ವಿರೋಧ ಇಲ್ಲ ಮಕ್ಕಳಿಗೆ ನೈತಿಕ ಗುಣಮಟ್ಟದ ಶಿಕ್ಷಣ ಸಿಗಬೇಕು. ಸಂವಿಧಾನ ಧರ್ಮ ನಿರಪೇಕ್ಷತೆ ಬಗ್ಗೆ  ಹೇಳುತ್ತೆ ಮಕ್ಕಳಲ್ಲಿ ಜಾತ್ಯಾತೀತ ಮನೋಭಾವ ಬೆಳಸಬೇಕು ಎಂದರು.

Key words:  BJP – power- Congress- Siddaramaiah