ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು- ಸಚಿವ ಎಂ.ಬಿ ಪಾಟೀಲ್.

ಬೆಂಗಳೂರು,ಅಕ್ಟೋಬರ್,18,2023(www.justkannada.in): ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಆಪರೇಷನ್ ಕಮಲ ಮಾಡಬೇಕಾದರೆ 65 ಶಾಸಕರು ಬೇಕು. ಬಿಜೆಪಿಗೆ ಅಷ್ಟು ಶಾಸಕರು ಸಿಗುತ್ತಾರಾ? 5 ಶಾಸಕರು ಕೂಡ ಸಿಗಲ್ಲ.  ಆಪರೇಷನ್ ನಂತರ ಬಿಜೆಪಿಯವರ ಕಥೆ ಏನಾಗಿದೆ ಗೊತ್ತಿದೆಯಲ್ಲ. ಬಿಜೆಪಿಯಲ್ಲಿ ನಾಯಕರಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಬಿಜೆಪಿಯಲ್ಲಿ ಏನೂ ಉಳಿದಿಲ್ಲ, ಸಂಪೂರ್ಣ ನಿರ್ಣಾಮವಾಗುತ್ತದೆ ಎಂದು ಕಿಡಿಕಾರಿದರು.

ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್,  ವೈಯಕ್ತಿಕ ಭೇಟಿಯೋ ಅಥವಾ ರಾಜಕೀಯ ಭೇಟಿನೋ ನನಗೆ ಗೊತ್ತಿಲ್ಲ. ರಮೇಶ್​ ಜಾರಕಿಹೊಳಿಗೆ ಕಾಂಗ್ರೆಸ್ ಸೇರುವ ಒಲವು ಇರಬಹುದು. ಬೇರೆ ಪಕ್ಷದ ನಾಯಕರ ಸೇರುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.

Key words: BJP – not – sinking ship- already- sinking – Minister -MB Patil.